ಶರಣರ ಚಿಂತನೆಯ ಆಧುನಿಕತೆ / ಡಾ. ವೈ. ಎಂ. ಯಾಕೊಳ್ಳಿ ಸವದತ್ತಿ.
ನಮ್ಮ ಸಮಕಾಲೀನ ಬದುಕನ್ನು ಕುರಿತು ಚಿಂತಿಸಲಾರದ ಸಾಹಿತ್ಯ ಅರ್ಥಪೂರ್ಣ ಎನಿಸಲಾರದು. ಇಹದ ಮತ್ತು ಪರದ ಲೌಕಿಕ ಬದುಕಿನ ಬೇಸಾಯಗಾರರಾದ ಶರಣರು ತಮ್ಮ ವರ್ತಮಾನಕ್ಕೆ ಸ್ಪಂದಿಸಿ ಬದುಕಿದವರಾಗಿದ್ದವರು. ಹಾಗೆಯೇ ಬರೆದವರಾಗಿದ್ದರು. ಅಂತೆಯೇ ಅವರ ವಚನಗಳು ಅಂದಿಗೂ ಇಂದಿಗೂ ಮುಖ್ಯವೆನಿಸಿವೆ. ಶರಣರ ವಿಚಾರಗಳು ಇಂದಿನ ಆಧುನಿಕ ಜಗತ್ತಿನ ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಹಿರಿಯ ಸಾಹಿತಿಗಳಾದ ಡಾ. ದೇ. ಜವರೇಗೌಡ ಅವರು ಬಸವಣ್ಣನವರು ಒಂದೇ ಒಂದು ವಚನದಲ್ಲಿ ಸಾರಿರುವದನ್ನು ವಿವರಿಸಿದ್ದಾರೆ. ಸಧ್ಯದ ಬದುಕು ಸಾರ್ಥಕಗೊಳ್ಳುವ ಪರಿ ಯಾವುದು ಎಂಬುದನ್ನು ತಮ್ಮ ಸಪ್ತಸೂತ್ರಗಳನ್ನು ಸಮಾಹಿತಗೊಳಿಸಿರುವ “ಕಳಬೇಡ ಕೊಲಬೇಡ” ಎಂಬ ವಚನದಲ್ಲಿ…





Total views : 67055