ಅಂಬಿಗರ ಚೌಡಯ್ಯನವರ ವಚನ | ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು | ಪ್ರೊ. ಜಿ. ಎ. ತಿಗಡಿ, ಧಾರವಾಡ.
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?ನಾಡೆಲ್ಲಕ್ಕೊ? ಪೂಜಿಸಿದಾತಗೋ?ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-53) ಯಾರೋ ಬಿತ್ತಿ ಬೆಳಸಿದ ಹೂವಿನ ಗಿಡದಲ್ಲಿನ ಹೂಗಳನ್ನು ಕೊಯ್ದು ತಂದು, ಊರಿನ ಜನರೆಲ್ಲರೂ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತಂದು ನಾನು ಪೂಜಿಸುತ್ತಿದ್ದೇನೆ ನೋಡಿರೆಂದು ನಾಡಿನ ಜನತೆಗೆ ಹೇಳುತ್ತಾ ಪೂಜಿಸಿದರೆ, ಆ ಪೂಜೆಯಿಂದ ಲಭಿಸುವ ಪುಣ್ಯದ ಫಲ ಯಾರಿಗೆ? ಹೂವಿಗೋ? ಕೆರೆಯ ನೀರಿಗೋ? ಇಡೀ ನಾಡಿಗೋ? ಅಥವಾ…