ಕಾಗೆಯ ತಿಂದವನಲ್ಲದೆ ಭಕ್ತನಲ್ಲ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಕಾಗೆಯ ತಿಂದವನಲ್ಲದೆ | ಭಕ್ತನಲ್ಲಕೋಣವ ತಿಂದವನಲ್ಲದೆ | ಮಹೇಶ್ವರನಲ್ಲಕೋಡಗ ತಿಂದವನಲ್ಲದೆ | ಪ್ರಸಾದಿಯಲ್ಲನಾಯ ತಿಂದವನಲ್ಲದೆ | ಪ್ರಾಣಲಿಂಗಿಯಲ್ಲಹೇಯವ ತಿಂದವನಲ್ಲದೆ | ಶರಣನಲ್ಲಇಂತೈವರ ತಿಂದವನಲ್ಲದೆ | ಲಿಂಗೈಕ್ಯನಲ್ಲ ಗುಹೇಶ್ವರಾ ||(ಸಮಗ್ರ ವಚನ ಸಂಪುಟ: ಐದು-2016/ಪುಟ ಸಂಖ್ಯೆ-256/ವಚನ ಸಂಖ್ಯೆ-1061) ಅಲ್ಲಮಪ್ರಭುಗಳ ಈ ವಚನವು ಷಟ್‌ಸ್ಥಲ ವಿಮರ್ಶೆಯ ಮೂಲಕ ಸಾಮಾಜಿಕ ವಾಸ್ತವಗಳನ್ನು ಬೆಡಗಿನ ಮನಸ್ತಿತಿ ಮೂಲಕ ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮನುಷ್ಯರ ಶರೀರದಲ್ಲಿ ಮೃಗ. ಮತ್ತು ಪಕ್ಷಿಯ ಸ್ವಭಾವಗಳು ವಾಸವಾಗಿರುತ್ತವೆ. ಪ್ರಾಣಿ ಪಕ್ಷಿ ಸಂಕುಲಗಳನ್ನು ಆಧ್ಯಾತ್ಮಿಕ ಮನೋಲೋಕದಲ್ಲಿ "ಕಾಗೆಯನ್ನು ತಿಂದವನಲ್ಲದೆ ಭಕ್ತನಾಗಲು ಸಾಧ್ಯವಾಗವಾಗುವುದಿಲ್ಲ” ಎನ್ನುವ ವ್ಯಂಗೋಕ್ತಿಯ ಪರಿಕ್ರಮವಿಲ್ಲಿ ಕಾಣಬಹುದು. ಪಕ್ಷಿ…






Total views : 62263