ಶ್ರಾವಣ ವಚನ ಚಿಂತನ-09: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇದ ಮಾಡಲೆ ಬೇಕು.ಸುಳಿವು ಸುಳುಹುನ್ನಕ್ಕ ಇದ ಮಾಡಲೆ ಬೇಕು.ಗುಹೇಶ್ವರನೆಂಬ [ಲಿಂಗಕ್ಕೆ]ಆತ್ಮವುಳ್ಳನ್ನಕ್ಕ ಭಕ್ತಿಯ ಮಾಡಲೇಬೇಕು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-82) ಕಾಯ ಇರುವವರೆಗೆ ಕಾಯಗುಣವ ಬಿಡಲಾಗದು. ಕಾಯಕ್ಕೆ ಏನೇನು ಬೇಕೊ ಅದೆಲ್ಲವನ್ನು ಕೊಡುತ್ತಲೇ ಹೋಗಬೇಕಾಗುತ್ತದೆ. ಕಾಯವೆಂಬುದು ಹಾಗೆಯೆ ಇರದು. ಗಾಳಿಯನ್ನು ತಿಂದು ಬದುಕಲಾಗದು. ಎಂಥ ಮಹಾತ್ಮನ ಶರೀರವಾದರೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಇಷ್ಟು ದಿನ ಆಹಾರವಿಲ್ಲದೆ ಬದುಕಿದರು, ಅಷ್ಟು ದಿನ ನಿರಾಹಾರಿಗಳಾಗಿ ಬದುಕಿದರು ಎಂಬಂಥ ಉದಾಹರಣೆಗಳನ್ನು ನಾವು ನೋಡಬಹುದು. ಇವನ್ನು ತಳ್ಳಿಹಾಕಲಾಗದು. ಜಗತ್ತಿನಲ್ಲಿ ಎಲ್ಲ…




Total views : 62297