ದಾಸೋಹ ತತ್ವದ ಚಿಂತನೆ | ಶ್ರೀ. ಆನಂದ ಯಲ್ಲಪ್ಪ ಕೊಂಡಗುರಿ, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ.
ಜನ್ಮ ಜನ್ಮಕ್ಕೆ ಹೋಗಲೀಯದೆ,`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,ಕೂಡಲಸಂಗಮದೇವಾ, ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-233/ವಚನ ಸಂಖ್ಯೆ-834) ಮೊದಲಿಗೆ ದಾಸೋಹದ ಪರಿಕಲ್ಪನೆಯನ್ನು 12 ನೇಯ ಶತಮಾನದಲ್ಲಿ ಶ್ರೀ ಜಗಜ್ಯೋತಿ, ಮಹಾ ಮಾನವತಾವಾದಿ, ಅಪ್ಪ ಬಸವಣ್ಣನವರು ನಮ್ಮ ಲಿಂಗಾಯತ ಧರ್ಮದ ಮೂಲ ತತ್ವ ಸಿದ್ಧಾಂತಗಳೊಂದಾಗಿ ಈ ದಾಸೋಹ ತತ್ವವನ್ನು ಮೊಟ್ಟ ಮೊದಲಿಗೆ ಈ ಜಗತ್ತಿಗೆಲ್ಲ ಪರಿಚಯಿಸಿದರು. ದಾಸೋಹವು ಸಮಾಜದಲ್ಲಿ ಸಮಾನತೆಯನ್ನು ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.ನಮ್ಮ ಕೂಡಲಸಂಗನ ಶರಣರಿಗಲ್ಲದೆಮಾಡುವ ಅರ್ಥ…





Total views : 67055