“ಅಧ್ಯಾತ್ಮ ಮತ್ತು ವಿಜ್ಞಾನಗಳ ಸಾಮ್ಯತೆಯ ಪ್ರಾಯೋಗಿಕ ಪ್ರತಿಪಾದನೆ” ಲೇಖಕರು: ಡಾ. ಬಸವರಾಜ ಸಾದರ.
ಧರ್ಮಕ್ಕೂ, ವಿಜ್ಞಾನಕ್ಕೂ ಎಂಥ ಸಂಬಂಧವಿದೆ? ಎಂಬ ಪ್ರಶ್ನೆ ಹಲವಾರು ವಿಜ್ಞಾನಿಗಳನ್ನೂ, ಧಾರ್ಮಿಕ ಚಿಂತಕರನ್ನೂ ನಿರಂತರ ಕಾಡುತ್ತ ಬಂದಿದೆ. ಶ್ರೇಷ್ಠ ವಿಜ್ಞಾನಿಗಳನೇಕರು ಧರ್ಮದಲ್ಲಿ ವಿಜ್ಞಾನವನ್ನೂ, ವಿಜ್ಞಾನದಲ್ಲಿ ಧರ್ಮವನ್ನೂ ಕಂಡಿದ್ದಾರೆ. ಹಾಗೆಯೇ ವೈಚಾರಿತೆಯನ್ನು ಗೌರವಿಸುವ ಕೆಲವು ‘ನಿಜ’ ಧಾರ್ಮಿಕರೂ ಅದೇ ಅಭಿಪ್ರಾಯದವರಾಗಿದ್ದಾರೆ. ಆದರೆ, ಇವರೆಲ್ಲ ತಮ್ಮ ಈ ಅಭಿಪ್ರಾಯಗಳ ಪ್ರತಿಪಾದನೆಯಲ್ಲಿ ಪ್ರಾಯೋಗಿಕ ಕ್ರಮವನ್ನು ಅನುಸರಿಸಿಲ್ಲವೆನಿಸುತ್ತದೆ. ನಂಬಿಗೆ ಹಾಗೂ ಭಾವನಾತ್ಮತ ನೆಲೆಯಲ್ಲಿ ಇವರೆಲ್ಲ ಈ ಸಂಬಂಧ ಕುರಿತು ಮಾತಾಡಿದ್ದಾರೆಯೇ ಹೊರತು, ಪ್ರಯೋಗಾತ್ಮಕ ಕ್ರಮ ಇಲ್ಲಿಲ್ಲ. ಅದನ್ನು ಹಾಗೆ ತೋರಿಸುವುದು ಕಷ್ಟದ ಕೆಲಸವೂ ಹೌದು. ಅಚ್ಚರಿಯೆಂದರೆ, ಇಂಥ ಕಷ್ಟದ ಕೆಲಸವನ್ನೂ ಹನ್ನೆರಡನೆಯ ಶತಮಾನದ…





Total views : 59314