ಶರಣ ನಗೆಯ ಮಾರಿತಂದೆಯವರ ವಚನ ನಿರ್ವಚನ | ಶ್ರೀಮತಿ. ಶಾಂತಾ ಪಸ್ತಾಪೂರ, ಕಲಬುರಗಿ.
ಕಲ್ಲಿಯ ಹಾಕಿ ನೆಲ್ಲವ ತುಳಿದುಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;ವಾಗದ್ವೈತವ ಕಲಿತುಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡುಮತ್ಸದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆಅದೇತರ ನುಡಿ? ಮಾತಿನ ಮರೆ.ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-420/ವಚನ ಸಂಖ್ಯೆ-1191) ಭಕ್ತಿಯನ್ನು ಹಾಸ್ಯದ ಮುಖಾಂತರ ಅರುಹಿದ ಮಹಾನುಭಾವಿಗಳು ಶರಣ ನಗೆಯ ಮಾರಿತಂದೆಯವರು. ಇವರ ಜನ್ಮಸ್ಥಳ “ಹಾದರಿಗೆ” ಎಂಬುದಾಗಿಯೆಂದು ಸಂಶೋಧಕರು ಹೇಳಿದ್ದರೂ ಕೂಡ ನಿಖರವಾದ ಮಾಹಿತಿಗಳು ದೊರೆಯದೆ ಇರುವುದರಿಂದ ಕಲಬುರಗಿ ಜಿಲ್ಲೆಯ ಏಲೇರಿ ಇವರ ಜನ್ಮಸ್ಥಳವೂ ಹೌದು ಮತ್ತು ಲಿಂಗೈಕ್ಯರಾದುದು ಇಲ್ಲಿಯೇ. ಕಲ್ಯಾಣದಲ್ಲಿ ಶರಣತ್ವವನ್ನು ಸ್ವೀಕಾರ ಮಾಡಿ ಶರಣರಾಗಿ ನಗುತ್ತ, ನಗಿಸುವ ಕಾಯಕ ಕೈಗೊಂಡವರು. ಶರಣ ನಗೆಯ…





Total views : 69902