ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ-ನಿರ್ವಚನ | ಪ್ರೊ. ಶ್ರೀದೇವಿ ಶೀಲವಂತ, ಕಲಬುರಗಿ.

ಅಡ್ಡಬಿದ್ದು ಶಿಷ್ಯನ ಮಾಡಿಕೊಂಬದಡ್ಡ ಪ್ರಾಣಿಗಳನೇನೆಂಬೆನಯ್ಯ.ಏನೇನೂ ಅರಿಯದ ಎಡ್ಡ ಮಾನವರಿಗೆಉಪದೇಶವ ಮಾಡುವಗೊಡ್ಡ ಮಾನವನ ಮುಖವ ತೋರದಿರಯ್ಯಾ.ಅದೇನು ಕಾರಣವೆಂದಡೆ:ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು,ಅಷ್ಟಮದಂಗಳೆಂಬಖೊಟ್ಟಿ ಗುಣಂಗಳ ಬಿಡಿಸಲಿಲ್ಲ.ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿಮುಕ್ತಿಪಥವನರುಹಲಿಲ್ಲ.ಮಹಾಶೂನ್ಯ ನಿರಾಳ ನಿರಂಜನಲಿಂಗವಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆಪ್ರಮಥರು ಮೆಚ್ಚುವರೆ?ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.ಅವರು ಇಹಲೋಕ ಪರಲೋಕಕ್ಕೆಹೊರಗೆಂದಾತನಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇಯ ಶತಮಾನದ ಅನುಭವ ಮಂಟಪದಲ್ಲಿದ್ದ ಮಹಾಶರಣರು ಅಂಬಿಗರ ಚೌಡಯ್ಯನವರು. ಹಾವೇರಿ ಜಿಲ್ಲೆಯ ರಾಣಬೆನ್ನೂರು ತಾಲೂಕಿನ ಚೌಡದಾನಪುರ ಗ್ರಾಮದಲ್ಲಿ ಜನಿಸಿದ ಈ ಶರಣರ ತಂದೆಯವರ ಹೆಸರು…

0 Comments

“ವಾಯುಗುಣ ಸರ್ಪ ಬಲ್ಲುದು” ಮಡಿವಾಳ ಮಾಚಿದೇವರ ವಚನ-ನಿರ್ವಚನ | ಶ್ರೀಮತಿ. ಸರೋಜಾ ಜಾಕರೆಡ್ಡಿ.

ವಾಯುವಿನ ಗುಣವ ಸರ್ಪ ಬಲ್ಲುದು.ಮಧುರದ ಗುಣವ ಇರುಹೆ ಬಲ್ಲುದು.ಗೋತ್ರದ ಗುಣವ ಕಾಗೆ ಬಲ್ಲುದು.ವೇಳೆಯ ಗುಣವ ಕೋಳಿ ಬಲ್ಲುದು.ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು,ಶಿವಜ್ಞಾನಾನುಭವವನರಿಯದಿರ್ದಡೆ,ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ.(ಮಡಿವಾಳ ಮಾಚಿದೇವರ ಸಮಗ್ರ ವಚನಗಳು-2022 / ಸಂ. ಅಶೊಕ ದೊಮ್ಮಲೂರು / ಪುಟ ಸಂಖ್ಯೆ-225 / ವಚನ ಸಂಖ್ಯೆ-268) ಅನುಭವ ಮಂಟಪದ ಮಹಾನ್ ಅನುಭಾವಿಗಳು ಮಡಿವಾಳ ಮಾಚಿದೇವರು. ಇವರ ಜನ್ಮಸ್ಥಳ ವಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ. ಇವರ ಗುರು ಶ್ರೀ. ಮಲ್ಲಿಕಾರ್ಜುನ, ತಂದೆ ಪರವತಯ್ಯಾ, ತಾಯಿ ಸುಜ್ಞಾನವ್ವ. ಹೆಂಡತಿ ಮಲ್ಲಿಗೆಮ್ಮ. ಕಾಯಕ ಶರಣರ ಬಟ್ಟೆಗಳನ್ನು ಮಡಿ ಮಾಡುವುದು. ಐಕ್ಯಸ್ಥಳ…

1 Comment

ಪರಮದಾಸೋಹಿ ಲಿಂಗಾಂಗಯೋಗಿ ನೀಲಾಂಬಿಕೆ ತಾಯಿಯವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಎನಗೆ ಲಿಂಗವು ನೀವೆ ಬಸವಯ್ಯ,ಎನಗೆ ಸಂಗವೂ ನೀವೆ ಬಸವಯ್ಯ,ಎನಗೆ ಪ್ರಾಣವು ನೀವೆ ಬಸವಯ್ಯ,ಎನಗೆ ಪ್ರಸಾದವು ನೀವೆ ಬಸವಯ್ಯ,ಎನಗೆ ಪ್ರಭೆ ಮೂರ್ತಿಯೂ ನೀವೆ ಬಸವಯ್ಯ,ಎನಗೆ ಸಂಗಯ್ಯನು ನೀವೆ ಬಸಯ್ಯ(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-876) ಬಸವಣ್ಣನವರ ಜೀವನದ ಒಂದು ಪ್ರಮುಖ ಭಾಗ ಮತ್ತು ಅಂತರಂಗದ ಸಖಿ ನೀಲಮ್ಮ ತಾಯಿಯವರು. ವಿದ್ಯೆ, ವಿನಯ ಮತ್ತು ಸಂಸ್ಕೃತಿಗಳ ಸಂಗಮವಾದ ನೀಲಮ್ಮನವರು ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವರಿಗೆ ತಮ್ಮನ್ನ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಸಹ ಸರಳ ಜೀವನವನ್ನು ತಮ್ಮದಾಗಿಸಿಕೊಂಡ ನೀಲಮ್ಮ ತಾಯಿಯವರು…

1 Comment

ದಾಸೋಹ ತತ್ವದ ಚಿಂತನೆ | ಶ್ರೀ. ಆನಂದ ಯಲ್ಲಪ್ಪ ಕೊಂಡಗುರಿ, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ.  

ಜನ್ಮ ಜನ್ಮಕ್ಕೆ ಹೋಗಲೀಯದೆ,`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,ಕೂಡಲಸಂಗಮದೇವಾ, ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-233/ವಚನ ಸಂಖ್ಯೆ-834) ಮೊದಲಿಗೆ ದಾಸೋಹದ ಪರಿಕಲ್ಪನೆಯನ್ನು 12 ನೇಯ ಶತಮಾನದಲ್ಲಿ ಶ್ರೀ ಜಗಜ್ಯೋತಿ, ಮಹಾ ಮಾನವತಾವಾದಿ, ಅಪ್ಪ ಬಸವಣ್ಣನವರು ನಮ್ಮ ಲಿಂಗಾಯತ ಧರ್ಮದ ಮೂಲ ತತ್ವ ಸಿದ್ಧಾಂತಗಳೊಂದಾಗಿ ಈ ದಾಸೋಹ ತತ್ವವನ್ನು ಮೊಟ್ಟ ಮೊದಲಿಗೆ ಈ ಜಗತ್ತಿಗೆಲ್ಲ ಪರಿಚಯಿಸಿದರು. ದಾಸೋಹವು ಸಮಾಜದಲ್ಲಿ ಸಮಾನತೆಯನ್ನು ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.ನಮ್ಮ ಕೂಡಲಸಂಗನ ಶರಣರಿಗಲ್ಲದೆಮಾಡುವ ಅರ್ಥ…

0 Comments

ರಗಳೆ ಕವಿ ಹರಿಹರನ “ಬಸವರಾಜದೇವರ ರಗಳೆ: ಒಂದು ಸಾಂಸ್ಕೃತಿಕ ಮುಖಾಮುಖಿ” | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಮತ್ತೆ ಕೇಳಲೆ ಕುಮಾರವ್ಯಾಸ ಬಸವನಿಪ್ಪತ್ತೈದು ಸ್ಥಲದ ರಗಳೆಯ ಮಾಡಿ ನಲಿವುತ್ತುದಾತ್ತಭಕ್ತಿಯೊಳಾ ವಿರೂಪಾಕ್ಷ ನೆಡೆಗೊಯ್ಯಲಿನಿದು ಮಿಗಿಲಾದುದೆಂದುಹೊತ್ತಗೆಯ ತೆಗೆದುಕೊಂಡುರೆ ನುಂಗಿದಂ ಚೆನ್ನೆಯಿತ್ತ ಪಾಲ್ಗುಡಿದಂತೆ ಸರ್ವರುಂ ಪೊಗಳಿದರುಚಿತ್ತಜಮದಾರಣ್ಯದಾವ ಹರಿಹರದೇವ ಕವಿಚಕ್ರವರ್ತಿಯೆಂದು(ಹರಿಹರ ಕವಿಯ ಬಸವರಾಜದೇವರ ರಗಳೆ/ಟಿ. ಎಸ್.‌ ವೆಂಕಣ್ಣಯ್ಯ/ಪೀಠಿಕೆ/ಪುಟ ಸಂಖ್ಯೆ. xiii) 12 ನೇ ಶತಮಾನದ ಬಸವಾದಿ ಶರಣರ ಪಕ್ಷಿನೋಟ ಕಣ್ಣೆದುರಿಗೆ ಬಂದಾಗಲೆಲ್ಲಾ ಕನ್ನಡದ ಕವಿ ಹರಿಹರ ಮತ್ತು ತೆಲುಗು ಭಾಷೆಯ ಕವಿ ಪಾಲ್ಕುರಿಗೆ ಸೋಮನಾಥ ಹಾಗೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕೋಲ್ಮಿಂಚಿನಂತೆ ಬೆಳಗುತ್ತಾರೆ. ಶರಣರ ಇತಿಹಾಸ ಮತ್ತು ಲಿಂಗಾಯತ ಧರ್ಮತತ್ವಗಳ ಅನ್ವೇಷಣೆಯಲ್ಲಿ ಪೂರಕವಾಗುವಂತೆ ತೆಲುಗಿನಲ್ಲಿ ಬರೆದ ಮೂರು ಉತ್ಕೃಷ್ಠ ಗ್ರಂಥಗಳೆಂದರೆ ಹರಿಹರನ ರಗಳೆಗಳು,…

0 Comments

ವಚನ ಪಯಣದ ಬೆಳಗು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಬದುಕಿನ ತಲ್ಲಣಗಳನ್ನು  ಸಂಘರ್ಷಗಳನ್ನು ತರ್ಕಿಸುವಾಗ  ಅನೇಕ ತಾತ್ವಿಕ ಧಾರೆಗಳು ಮುಖಮುಖಿಯಾಗುತ್ತವೆ, ಶರಣರ ಹಣತೆ ಬೆಳಕು ಜ್ಯೋತಿ ಒಂದು ವ್ಯವಸ್ಥಿತವಾದ  ವೈಚಾರಿಕ  ಆಕರವದು. ಭೌತಿಕ ಮತ್ತು ಅಧ್ಯಾತ್ಮದಲ್ಲಿ  ಇದಕ್ಕೆ ನಾನಾ ಅರ್ಥಗಳಿವೆ. ನಮ್ಮ ಸಂಸ್ಕೃತಿಯನ್ನು ಎತ್ತರಿಸುವ, ವಿಶಾಲವಾಗಿಸುವ ಪರಿಕ್ರಮವು ಇದರಲ್ಲಿ ಅಡಗಿದೆ. ದೀಪವನ್ನು ಹಚ್ಚುವುದು ಕೇವಲ ಆಚರಣೆಯಲ್ಲ. ನಮ್ಮ ಅಂತರಂಗದ ಜ್ಯೋತಿಯನ್ನು ಹೊರಗೆ ಬೆಳಗಿಸುವ ಒಂದು ಅವಕಾಶವದು. ಹಣತೆ ಎಂಬ ಪದವೇ ಶರಣರ ಬಯಲಿನಲ್ಲಿ  ಮನುಷ್ಯರು ಕಂಡುಕೊಂಡ ಸಂಸ್ಕೃತಿಯಾಗಿರಬಹುದು. ಪಂಚಭೂತಗಳಿಂದಾದ ಮನುಷ್ಯನ ಈ ದೇಹವನ್ನು ಹಣತೆಗೆ ಹೋಲಿಸಿ  ಅದರಂತೆ ಪರೋಪಕಾರಿಯಾಗಿ ಬೆಳಗಬೇಕು. ವಚನಕಾರರು ಪ್ರಣತಿ ಜ್ಯೋತಿ ತೈಲವನ್ನು ವಿಶೇಷವಾಗಿ ಕಂಡಿದ್ದಾರೆ. ಅರಿವಿನ…

0 Comments

ಶರಣ ವೈದ್ಯ ಸಂಗಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ. ಗೌರಿ ಓಂಪ್ರಕಾಶ ಕರಣಗಿ, ಕಲಬುರಗಿ.

ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೇ?ಆತ್ಮನಿದ್ದಲ್ಲಿ ಅರಿಯದೆ ಅಸುಸತ್ತ ಮತ್ತೆ ಮೋಕ್ಷವನರಸಲುಂಟೆ?ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದು ತಂದೆ,ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ.ಆತ್ಮಂಗೆ ಭವವಿಲ್ಲ, ಅರಿವಿಂಗೆ ತುದಿ ಮೊದಲಿಲ್ಲ.ಇದು ನಿರಿಗೆ ಕೊಳಬಲ್ಲಡೆ,ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ,ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-56/ವಚನ ಸಂಖ್ಯೆ-116) ಶರಣ ವೈದ್ಯ ಸಂಗಣ್ಣನವರು 12 ನೇ ಶತಮಾನದ ಅನುಭವ ಮಂಟಪದ ಮಹಾನುಭಾವಿಯಾಗಿದ್ದ ವಚನಕಾರರು. ಇವರ ವೈಯಕ್ತಿಕ ಅಂಶಗಳ ಮಾಹಿತಿ ಲಭ್ಯವಿರುವುದಿಲ್ಲ. ಕೆಲವು ವಿಧ್ವಾಂಸರ ಪ್ರಕಾರ ಇವರು ಮೂಲತಃ ಆಸ್ಸಾಂದವರಾಗಿರಬಹುದೆಂಬುದು. ಆದರೆ ವಚನ…

0 Comments

ಮಹಾನವಮಿ|ವಿಜಯದಶಮಿ: ಸತ್ಯ ಶರಣರ ಕಗ್ಗೊಲೆಯಾದ ದಿನ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಸತ್ಯ ಶರಣರ ಕಗ್ಗೊಲೆಯಾದ ದಿನ. ವೈದಿಕರ ವಂಚನೆಗೆ ಸತ್ಯ ಸತ್ತ ದಿನ. ಶರಣರಿಗೆ ಮರಣವು ಮಹಾನವಮಿಯಾಯಿತು! ವೈದಿಕರಿಗೆ ವಿಜಯೋತ್ಸವವಾಯಿತು! ಲಿಂಗಾಯತ ಧರ್ಮದವರಾದ ನಾವು ವಿಜಯೋತ್ಸವ ಆಚರಿಸುವುದು ಸತ್ಸಂಪ್ರದಾಯವೋ ಅಥವಾ ಸತ್ತ ಸಂಪ್ರದಾಯದವೋ ಸ್ವಲ್ಪ ಯೋಚಿಸಿ. ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ…

0 Comments

ಅರಿವಿನ ಮಂಟಪ: ಅನುಭವ ಮಂಟಪ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

“ಮಂಟಪ” ದ ಪರಿಕಲ್ಪನೆ ಸ್ಥಾವರವೆನಿಸಿದರೂ “ಅನುಭವ” ವೆಂಬುದು ಸದಾ ಚಲನಶೀಲವಾದುದು. 12 ನೇ ಶತಮಾನದ ಸಂದರ್ಭವಂತೂ ಅನುಭವಗಳ ದಾಖಲೀಕರಣ. ಅದು ಅರಿವಿನ ಸ್ಪೋಟವಾದ ಯುಗ, ಮಾನವರ ಬದುಕಿನಲ್ಲಿ ಅನುಭವವೆಂಬುದು ಅರಿವಿನ ಮೂಲಸ್ಥಾನ. ಯಾರು ಬದುಕನ್ನು ಅನುಭವಿಸುತ್ತಾ ಬದುಕುತ್ತಾರೋ ಅಂತಹವರಿಗೆ ಮಾತ್ರ ಅನುಭವದ ನಿಜದ್ರವ್ಯ ದೊರೆಕಿಕೊಳ್ಳಲು ಸಾಧ್ಯ. ಒಂದು ಸಮುದಾಯ ಇನ್ನೊಂದು ಸಮುದಾಯದ ಅಶೋತ್ತರಗಳಿಗೆ ಸ್ಪಂದಿಸುತ್ತಾ ತಾನು ಬದುಕುತ್ತಾ ಇತರಿಗೂ ಆ ಬದುಕು ದೊರೆಯಲಿ ಎಂದು ಬಯಸುವ ಸಹಜೀವನದ ಈ ಸರಳ ವಿಧಾನದ ಬದುಕು 12 ನೇ ಶತಮಾನದ ಶರಣರದಾಗಿತ್ತು. ಇವರೆಲ್ಲ ಕಾಯಕ ಜೀವಿಗಳಾಗಿದ್ದರು. ವಿವಿಧ ವೃತ್ತಿಗಳನ್ನು ಅವಲಂಬಿಸಿದ…

0 Comments

ಬಸವಣ್ಣನವರ ವಚನ ವಿಶ್ಲೇಷಣೆ |  ಡಾ. ನೀಲಾಂಬಿಕಾ ಪೋಲಿಸ ಪಾಟೀಲ, ಕಲಬುರಗಿ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.ನನೆಯೊಳಗಣ ಪರಿಮಳದಂತಿದ್ದಿತ್ತು.ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. (ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1) ಬಸವಣ್ಣನವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಮತ್ತು ಮಹಾನ್ ಮಾನವತಾವಾದಿಗಳು. ಮಾನವ ಇಹ-ಪರ ಎರಡನ್ನೂ ಹೇಗೆ ಸಾಧಿಸಕೊಳ್ಳಬೇಕೆಂಬುದನ್ನು ತಮ್ಮ ನಡೆ ಮತ್ತು ನುಡಿಯಿಂದ ತೋರಿಸಿ ಕೊಟ್ಟವರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ, ಸಾಧನಾ ಭೂಮಿ ಅದೇ ಜಿಲ್ಲೆಯ ಕೂಡಲ ಸಂಗಮ, ಕಾಯಕ ಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಅಕ್ಕ ಶರಣೆ ಅಕ್ಕನಾಗಮ್ಮ, ಮಡದಿಯರು ಶರಣಿ ಗಂಗಾಂಬಿಕೆ ಮತ್ತು ಶರಣಿ ನೀಲಾಂಬಿಕಾ,…

1 Comment