ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ?ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ?ಶರಣರು ಬಂದು ಬಾಗಿಲಲ್ಲಿ ನಿಂದಿರಲುತನ್ನ ತಾ ಮರೆದಿಪ್ಪವರ ಕಂಡಡೆನಮ್ಮ ಗುಹೇಶ್ವರ ಲಿಂಗ ಒಡೆಯ ಹಾಯ್ಕದೆ ಮಾಣ್ಬನೆ?(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1184) ಜಂಗಮಮೂರ್ತಿಯಾದ ಅಲ್ಲಮ ಪ್ರಭುಗಳು ಜ್ಞಾನ ವೈರಾಗ್ಯದ ಎತ್ತರ ಶಿಬರ. ಇವರು ನಿಜವಾದ ಅನುಭಾವಿಗಳು. ಇವರು ಉಸುರಿದ ಅನುಭಾವದ ಒಲವಿನ ನಿಲುವಿನ ನುಡಿಗಳು ಅತ್ಯಂತ ಗಹನವಾದುದು. ತಮ್ಮ ಗುರುವಾದ ಅನಿಮಿಷಯೋಗಿಯಿಂದ ಲಿಂಗದೀಕ್ಷೆ ಪಡೆದುಕೊಂಡು ಲಿಂಗದೊಂದಿಗೆ ಅನುಸಂಧಾನಗೊಳ್ಳುತ್ತಾ ಅಲ್ಲಮ ಪ್ರಭುಗಳು ಶಿವಯೋಗಿಯಾಗಿ, ಮಹಾ ಅನುಭಾವಿಯಾಗಿ ರೂಪುಗೊಳ್ಳುತ್ತಾರೆ. ಲೋಕ ಸಂಚಾರ ಮಾಡುತ್ತಾ ದೀನ-ದುರ್ಬಲರನ್ನು ಸಂತೈಸುತ್ತಾ, ಅಜ್ಞಾನಿಗಳನ್ನು ಎಚ್ಚರಿಸುತ್ತಾ, ಸಾಧಕರಿಗೆ…





Total views : 72882