ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ / ಶ್ರೀಮತಿ. ಅನುಪಮಾ ಪಾಟೀಲ.
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ.ಎನ್ನ ಬಿಡು, ತನ್ನ ಬಿಡು ಎಂಬುದು ಮನೊವಿಕಾರ.ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನಮನ ನಿಮ್ಮನೈದುಗೆ, ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-14 / ವಚನ ಸಂಖ್ಯೆ-36) ಮಾನವನು ತನ್ನ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವದರೊಂದಿಗೆ ಬಹಿರಂಗದ ದುಃಖವನ್ನು ದೂರ ಮಾಡುತ್ತದೆ, ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಸುತ್ತಿರಬೇಕು. ದೇಹ ಮತ್ತು ಮನಸ್ಸು ಎರಡು ಅತಿ ಮುಖ್ಯ ಅಂಗಗಳು. ದೇಹ ಸ್ಥೂಲ ಶರೀರವಾದರೆ ಮನಸ್ಸು ಸೂಕ್ಷ್ಮ ಶರೀರ ಅಂತ ಗುರುತಿಸಲಾಗಿದೆ. ಎರಡನ್ನೂ…