ಕಾಯಕ ನಿಷ್ಠೆಯ ಕುಂಬಾರ ಗುಂಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆತೆಲುಗ ಜೊಮ್ಮಯ್ಯನಾಗಬಲ್ಲರೆ?(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431) ಸಿದ್ಧರಾಮೇಶ್ವರರ ಈ ವಚನವೊಂದೆ ಸಾಕು ಗುಂಡಯ್ಯನವರ ಘನತೆಯನ್ನು ತಿಳಿಯಲು.ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಮಟ್ಟದ ಕಸಬನ್ನು ಕಾಯಕವೆನ್ನುವ ದೈವತ್ವದೆಡೆಗೆ ಕರೆದೊಯ್ದದ್ದು ಬಸವಾದಿ ಶರಣ-ಶರಣೆಯರು. ಮಡಿವಾಳ, ಬಡಗಿ, ಕುಂಬಾರ, ಕಮ್ಮಾರ, ನೇಕಾರ ಹಾರುವ ಎಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ತಿಳಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ಅನುಭವ ಮಂಟಪದ 770 ಅಮರಗಣಂಗಳ ಶರಣರಲ್ಲಿ ಒಬ್ಬರು ನಮ್ಮ ಕುಂಬಾರ ಗುಂಡಯ್ಯನವರು. ಗುಂಡಯ್ಯನವರ ಜನ್ಮ ಸ್ಥಳ ಬೀದರಿನ ಭಲ್ಲುಕೆ (ಈಗಿನ…