ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments

ಧರ್ಮಚಿಂತಕ ಮತ್ತು ವಿಜ್ಞಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ಚಂದ್ರಶೇಖರ ಎಚ್.‌ ಎನ್. | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಈತನ ಹೆಸರು ಚಂದ್ರಶೇಖರ ಎಚ್‌. ಎನ್‌. (AIವಿಜ್ಞಾನಿಗಳು) ಪಂಚಸೂತ್ರ ಅಕಾಡೆಮಿ, ಲಂಡನ್.‌ AIಅಂದರೆ Artificial Intelligence. ಇದನ್ನು ನಾವು ಆಡು ಭಾಷೆಯಲ್ಲಿ Garbage In Garbage Out (GIGO) ಅಂತೀವಿ. ಕಸ ಹಾಕಿದರೆ ಕಸ ಬರುತ್ತದೆ. ಅಂದರೆ ಇಲ್ಲಿ ಯಾವುದೇ ಸೃಜನಶೀಲತೆ ಇರುವುದಿಲ್ಲ. ನಾವು ಏನು Feedಮಾಡತೀವೋ ಅದು ಹೊರಗ ಬರುತ್ತದೆ ಅಷ್ಟೇ. ಉದಾಹರಣೆಗೆ ಒಂದು ವ್ಯಕ್ತಿಯ ಫೋಟೋ ಮಾಡಬೇಕಾದರೆ 4ನೇ ತರಗತಿಯ ಹುಡುಗ ಕೂಡ Voice Commandನೀಡಿದರೆ ಒಂದು ಫೋಟೋ ಅವನ Voice Commandಗೆ ತಕ್ಕ ಹಾಗೆ ಫೋಟೋ Readyಆಗುತ್ತದೆ. ಇದರಲ್ಲಿ ಯಾವ Rocket Scienceಮಣ್ಣಾಂಗಟ್ಟಿಯೂ…

1 Comment

ಶರಣ ಶಂಕರ ದಾಸಿಮಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

12 ನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬೊಬ್ಬ ಶರಣರ ಚರಿತ್ರೆ ಅಮೋಘವಾದುದಾಗಿದೆ. ಕಾಯಕಯೋಗಿಗಳಾದ ಅವರು ಕಾಯಕದಿಂದಲೇ ಜೀವನ್ಮುಕ್ತಿಹೊಂದಿದವರು. ಕಾಯಕಯೋಗದಿಂದ ಶಿವಯೋಗ ಸಾಧಿಸಿದ ಮಹಾತ್ಮರವರು. “ಕಾಯಕ” ಮತ್ತು “ಲಿಂಗಪೂಜೆ” ಇವರ ಬಾಹ್ಯ ಮತ್ತು ಅಂತರಂಗದ ಪರಂಜ್ಯೋತಿಗಳಾಗಿದ್ದವು. ಕಾಯಕದಿಂದ ದೊರೆತ “ಅನುಭಾವ” ಲಿಂಗಪೂಜೆಯಿಂದ ದೊರೆತ “ಅನುಭಾವ” ದಿಂದ ಶರಣರು ಅನಿರ್ವಚನೀಯವಾದ ಪರಮಾನಂದ ಅನುಭವಿಸಿದವರು. ಅಂತಹ ಶಿವಶರಣರಲ್ಲಿ “ಶರಣ ಶಂಕರ ದಾಸಿಮಯ್ಯ” ನವರು ಒಬ್ಬರು. ನದಿಗಳೆಲ್ಲವೂ ಹರಿದು ಸಮುದ್ರವನ್ನು ಸೇರುವಂತೆ ಎಲ್ಲ ಶರಣರು ಬಸವಣ್ಣನೆಂಬ ಸಾಗರವನ್ನೇ ಕೂಡಿದರು. ಬಸವಣ್ಣನೆಂಬ ಚುಂಬಕ ಶಕ್ತಿ ಉತ್ತರ-ದಕ್ಷಿಣ ಧ್ರವಗಳನ್ನೆಲ್ಲ ತನ್ನತ್ತ ಸೆಳೆದುಕೊಂಡಿದ್ದು 12 ನೇ ಶತಮಾನದ…

0 Comments

ಶರಣ ಕಂಬಳಿ ನಾಗಿದೇವರ ವೈಚಾರಿಕ ಸ್ವಾತಂತ್ರ‍್ಯ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯದ ಉತ್ಕೃಷ್ಟತೆ ಪ್ರಾರಂಭವಾದದ್ದು 12 ನೇ ಶತಮಾನದ ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕೀಯ ಜೀವನಗಳಲ್ಲಿ ಬದಲಾವಣೆ ತರುವ ಉದ್ದೇಶವದು. ವಚನಗಳ ಸ್ಪಷ್ಟ ಬರವಣಿಗೆ ಅನನ್ಯ ಪದ ಪ್ರಯೋಗಗಳ ಪುನರ್ಸೃಷ್ಟಿ ಅಂದಿನ ವೈಚಾರಿಕ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಂಡದ್ದು ಇದೇ ಕಾಲದಲ್ಲಿ. ವರ್ಗ ಮತ್ತು ವರ್ಣಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನದ ಬದುಕನ್ನು ನೀಡಿತ್ತು. ಬಸವಣ್ಣನವರ ಮುಂದಾಳತ್ವದಲ್ಲಿ ಕೈಗೊಂಡ ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ, ತತ್ವ ಕಲ್ಯಾಣದ ಚಳುವಳಿಯನ್ನು ಹುಟ್ಟು ಹಾಕಿತು. ವ್ಯಕ್ತಿ ಕಲ್ಯಾಣವು ಸ್ತ್ರೀಯರಿಗೆ ದುರ್ಬಲರಿಗೆ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುವುದು. ಸಮುದಾಯದ ಜನರ ಯೋಗಕ್ಷೇಮವನ್ನು ನೀಡಿ…

0 Comments

ಊಳಿಡುತ್ತಿರುವ ವೀರಶೈವರ ಶನಿ ಸಂತಾನ ರವಿ ಹಂಜ್‌ ಎನ್ನುವ ತಿರಬೋಕಿ ಬೀದಿ ಶ್ವಾನ |Dr. Vijayakumar Kammar, Tumkur.

ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಸಮ ಸಮಾಜ ನಿರ್ಮಾಣವಾಗಿ ದೇವಾಲಯಗಳಿಗೆ ಪ್ರಜೆಗಳು ಹೋಗುವುದನ್ನು ನಿಲ್ಲಿಸುತ್ತಾರೆ. ವೈದಿಕರಿಗೆ ಈ ಸಾಮಾಜಿಕ ಸಮಾನತೆಯ ಚಳುವಳಿಯಿಂದ ತಮ್ಮ ಆದಾಯವು ನಿಂತು ಹೋಗಿ ಅವರ ಜೀವನ ನಡೆಸುವುದು ಕಷ್ಟವಾದಂಥ ಸಂದರ್ಭದಲ್ಲಿ ಬಸವಾದಿ ಶರಣರನ್ನು ಕಗ್ಗೊಲೆ ಮಾಡುವಂಥ ಹೀನ ಕೃತ್ಯಕ್ಕೂ ಇಳಿದಂಥಾ ಇತಿಹಾಸ ನಮಗೆ ವಚನಗಳ ಮೂಲಕ ವೇದ್ಯವಾಗುತ್ತದೆ. ಶರಣ ತುರಗಾಹಿ ರಾಮಣ್ಣನವರ ಈ ವಚನ ಇದನ್ನು ಪುಷ್ಟೀಕರಿಸುತ್ತದೆ. ಬಂದಿತ್ತು ದಿನ ಬಸವಣ್ಣ ಕಲ್ಲಿಗೆಚನ್ನಬಸವಣ್ಣ ಉಳುವೆಯಲ್ಲಿಗೆಪ್ರಭು ಅಕ್ಕ ಕದಳಿದ್ವಾರಕ್ಕೆಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿಅಡಗಿಹರೆಲ್ಲರು ಅಡಗಿದುದ ಕೇಳಿ ನಾಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು.(ಸಮಗ್ರ…

2 Comments

ಆದಯ್ಯ ಶರಣರ ವಚನ – ನಿರ್ವಚನ ವಚನ | ಶ್ರೀಮತಿ ಸುರೇಖಾ ಶೀರಪಾಟೀಲ, ಕಲಬುರಗಿ.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,ಪ್ರಾಣದಲ್ಲಿ ನಿರ್ಭಯ, ಚಿತ್ತದಲಿ ನಿರಪೇಕ್ಷೆ.ವಿಷಯಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೋ.(ಸಮಗ್ರ ವಚನ ಸಂಪುಟ-ಆರು/2021/ಪುಟ. ಸಂ-346/ವಚನ. ಸಂ. 954) ಶರಣ ಆದಯ್ಯನವರು 12 ನೇ ಶತಮಾನದ ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಚನಗಳಲ್ಲಿ ಬಸವಣ್ಣ, ಮಡಿವಾಳ, ಅಲ್ಲಮಪ್ರಭುದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರನ್ನು ಸ್ಮರಿಸಿರುವದರಿಂದ ಇವರು ಬಸವಣ್ಣನವರ ಸಮಕಾಲೀನರು ಎನ್ನಬಹುದು. ಶರಣ ಆದಯ್ಯನವರು ಮೂಲತ ಸೌರಾಷ್ಟ್ರ ಅಂದರೆ ಗುಜರಾತಿನವರು. ತಂದೆ ಪಾರದತ್ತ, ತಾಯಿ ಪುಣ್ಯವತಿ. ಇವರ ಕಾಯಕ ಚಿನ್ನ ಮುತ್ತಿನ (ಹರದಿಕೆ) ವ್ಯಾಪಾರ. ಈ…

0 Comments

ಅಮರಗೊಂಡದಲ್ಲಿ ಬಸವ ಪುರಾಣ ಆಲಿಸಿ ಸದ್ಗತಿ ಹೊಂದಿದ ಗುಬ್ಬಿಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಶ್ರವಣ ಎಂದರೆ ಆಲಿಸುವಿಕೆ. ಕೇವಲ ಕೇಳುವುದಲ್ಲ, ಅರಿತು ಅಳವಡಿಸಿಕೊಳ್ಳುವುದು. ಶರಣರ ವಚನಗಳಲ್ಲಿ ಶ್ರವಣವು ಶಿವತತ್ವದ ಅರಿವು, ಗುರು ಉಪದೇಶ ಮತ್ತು ಭಕ್ತಿ ಮಾರ್ಗದ ಮೂಲವೆಂದು ಬಣ್ಣಿಸಲಾಗಿದೆ. ವಿಶ್ವಗುರು ಬಸವಣ್ಣನವರ ಪ್ರಕಾರ ಭಕ್ತರು ಪರಮಾತ್ಮನ ಗುಣಗಾನವನ್ನು ಭಕ್ತಿಯಿಂದ ಆಲಿಸಿ ಮನನ ಮಾಡುವುದಾಗಿದೆ. ಅದಕ್ಕೆಂದು ಬಸವಣ್ಣನವರು ಶರಣರ ಉಪದೇಶ ಕೇಳುವುದು, ಅವರ ಸಂಗ ಮಾಡುವುದೇ ನಿಜವಾದ ಭಕ್ತಿ ಎಂದಿದ್ದಾರೆ. ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ!ಕರುಣಾಕರ, ಅಭಯಕರ, ವರದ, ನೀ ಕರುಣಿಸಯ್ಯಾ.ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,ಭಕ್ತಜನಮನೋವಲ್ಲಭ ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-22/ವಚನ…

0 Comments

ಬಸವ ಜಯಂತಿ ಆರಂಭ ಮತ್ತು ಹರ್ಡೇಕರ ಮಂಜಪ್ಪನವರ ಸಾಧನೆಗಳ ಅವಲೋಕನ| ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ

ಇವನಾರವ, ಇವನಾರವ,ಇವನಾರವನೆಂದೆನಿಸದಿರಯ್ಯಾ.ಇವ ನಮ್ಮವ, ಇವ ನಮ್ಮವ,ಇವ ನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾನಿಮ್ಮ ಮನೆಯ ಮಗನೆಂದೆನಿಸಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62) ಈ ವಚನವು 'ನಾನು' ಎಂಬ ಅಹಂಕಾರವನ್ನು ತ್ಯಜಿಸುವ ಮಹತ್ವವನ್ನು ಹೇಳುತ್ತದೆ. "ಇವನು, ಇವನು" ಎಂದು ಬೇರೆತನವನ್ನು ನೋಡುವುದು ಅಜ್ಞಾನ. "ಇವನೇ ನಾನು" ಎಂದು ಏಕತ್ವವನ್ನು ಅರಿತಾಗ ಅಹಂಕಾರ ಕಳೆಯುತ್ತದೆ. ಕೊನೆಯಲ್ಲಿ ನಾನು-ನೀನು ಎಂಬ ಭೇದವೇ ಇಲ್ಲ, ಎಲ್ಲವೂ ಒಂದೇ ಎಂಬ ಜ್ಞಾನಕ್ಕೆ ಬರಬೇಕು ಎಂದು ಈ ವಚನದ ಸಾರವಾಗಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರು ಹರ್ಡೇಕರ ಮಂಜಪ್ಪನವರಿಗೆ "ಕರ್ನಾಟದ ಮಹಾತ್ಮ" ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ…

0 Comments

ಶಿವಶರಣ ಮಾದಾರ ಚೆನ್ನಯ್ಯನವರ ವಚನ ನಿರ್ವಚನ | ಡಾ. ಸಾರಿಕಾದೇವಿ ಎಲ್. ಕಾಳಗಿ, ಕಲಬುರಗಿ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.ನುಡಿ ಲೇಸು, ನಡೆಯಧಮವಾದಲ್ಲಿ,ಅದು ಬಿಡುಗಡೆಯಿಲ್ಲದ ಹೊಲೆ.ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?ಆಚಾರವೆ ಕುಲ, ಅನಾಚಾರವೆ ಹೊಲೆ,ಇಂತೀ ಉಭಯವ ತಿಳಿದರಿಯಬೇಕು.ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,ಅರಿ ನಿಜಾ[ತ್ಮ]ರಾಮ ರಾಮನಾ.(ಸಂಕೀರ್ಣ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447 /ವಚನ ಸಂಖ್ಯೆ-1153) ಶಿವಶರಣ ಮಾದಾರ ಚೆನ್ನಯ್ಯನವರು 12 ನೇ ಶತಮಾನದ  ಶ್ರೇಷ್ಠ ವಚನಕಾರರು ಮತ್ತು ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು ಎಂದು ತಿಳಿದು ಬರುತ್ತದೆ. ಇವರು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರು. ಇವರು ಅನುಭವ ಮಂಟಪದ ಅನುಭಾವಿಗಳಾಗಿದ್ದರು. ಇವರು ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆ…

0 Comments

ಶರಣ ಕೀಲಾರದ ಭೀಮಣ್ಣನವರ ವಚನ-ನಿರ್ವಚನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ:ನಾನಾ ವರ್ಣದ ಗೋವುಗಳೆಲ್ಲವೂ ಕೂಡಿಒಂದೇ ಹೊಲದಲ್ಲಿ ಮೇದು,ಆರು ಕೆರೆಯ ನೀರ ಕುಡಿದು,ಒಂದೇ ದಾರಿಯಲ್ಲಿ ಬಂದು,ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,ಹಾಲಿಗೆ ಏಕವರ್ಣ.ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿಚಟ್ಟಿ ಹತ್ತದೆ, ಹಸುಕು ನಾರದೆ,ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿಕಾಸಿ ಉಣಬಲ್ಲಡೆ ಆತನೆ ಭೋಗಿ.ಆತ ನಿರತಿಶಯಾನುಭಾವ ಶುದ್ಧಾತ್ಮನು,ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-75)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಕೊಟ್ಟಿಗೆ: ದನಕರುಗಳನ್ನು ಕಟ್ಟುವ ಸ್ಥಳ.ಭಾಜನ: ಪಾತ್ರೆ.ಚಟ್ಟಿ: ಮಣ್ಣಿನ ಪಾತ್ರೆ, ಮಡಿಕೆ.ಕೌರು: ಸುಟ್ಟ ವಾಸನೆ, ಹೊಗೆ, ನಾತ.ನಿರತಿಶಯ: ಹೆಚ್ಚಳವಿಲ್ಲದೆ, ಅಸಾಧಾರಣವಲ್ಲದ. ಇದು ಶರಣ ಕೀಲಾರದ…

0 Comments