“ಸಿದ್ದರಾಮೇಶ್ವರರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಅಂಶಗಳು”/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. ಸಿದ್ಧರಾಮೇಶ್ವರರು ತಮ್ಮ ಇಡಿ ಬದುಕಿನುದ್ದಕ್ಕೂ ಕಾಯಕವನ್ನೇ ಉಸಿರಾಗಿರಿಸಿಕೊಂಡಿದ್ದರು. ಬದ್ಧತೆಗೆ ತುಡಿದ ಸಿದ್ಧರಾಮೇಶ್ವರರು ಶರಣ ತತ್ವಗಳನ್ನು ರೂಢಿಸಿಕೊಂಡವರು. ಮಾನವೀಯತೆಯ ಮೌಲ್ಯಗಳಿಂದ ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆದವರು. ತಮ್ಮ ವಚನಗಳ ಮೂಲಕ ಶ್ರೇಷ್ಠ ಮಾನವೀಯ ಸಂವೇದನೆಗಳನ್ನು ಹಂಚಿದವರು ಮತ್ತು ಚಿಂತಿಸಿದವರು. ಇವರದು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ. ಸಕಲ ಚರಾ-ಚರ ಚೇತನವನ್ನು ಪ್ರೀತಿಸಿದ ಇವರಲ್ಲಿ ತಾಯ್ತನವಿದೆ. ಹೆಂಗರುಳಿದೆ. ಈ ಕಾರಣದಿಂದಲೇ ಸಿದ್ಧರಾಮೇಶ್ವರರು ಪಶು, ಪಕ್ಷಿ ಮುಂತಾದ ಜೀವ ಚೇತನಗಳಿಗಾಗಿ ಕೆರೆ-ಕಟ್ಟೆ ಬಾವಿಗಳನ್ನು,…