ಬಸವಣ್ಣನವರ ವಚನಗಳಲ್ಲಿ ಸಾಂಸ್ಕೃತಿಕ ನೆಲೆಗಳು / ಡಾ. ಲಕ್ಷ್ಮೀಕಾಂತ ಪಂಚಾಳ
ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ…