ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಕಾನನದ ಅತ್ಯಂತ ಸುಂದರ ಪ್ರಕೃತಿಯಲ್ಲಿ, ನೈಸರ್ಗಿಕ ಸೊಬಗಿನ ತಾಣದಲ್ಲಿ ಅತ್ಯುತ್ತಮ ಸಂಪತ್ತು ಇರುವುದೇ ಹೊರತು ಸಿಡಿದು ಬೀಳುವ ಮುಳ್ಳಿನ ಕಂಟಿಯಲ್ಲ. ಭೌತಿಕವಾಗಿ ಕಾಣುವ ವಸ್ತು ತಾನಲ್ಲ. ಅದೇ ರೀತಿ ಸಂಸಾರವೆಂಬ ಮಡುವಿನೊಳಗೆ ಸಿಗುವುದು ಮೋಹವೆಂಬ ಮೀನಲ್ಲ, ಮುಕ್ತಿ ಮಾರ್ಗವನ್ನರಸಲು ತಪಸ್ಸು ಮಾಡುವೆನು ಎಂದು ಕಷಾಯ ವಸ್ತ್ರಗಳನ್ನು ಧರಿಸುವ ಢಾಂಬಿಕರ ತರಹ ನನಗೆ ವೇಳೆ ಇಲ್ಲ. ನಿಜವಾದ ವ್ಯಕ್ತಿಯನ್ನು ಪರೀಕ್ಷಿಸಲು…





Total views : 51417