ತಾಡೋಲೆಗಳಲ್ಲಿ ವಚನಗಳ ಸಂಗ್ರಹ | ಡಾ. ಜಿ ವಿ ಮಂಜುನಾಥ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ದೈವದೊಡನೆ ಸಂಸ್ಕೃತ ಭಾಷೆಯಲ್ಲೇ ಸಂವಾದ ಸಾಧ್ಯ ಎನ್ನುವ ಕಾಲ ಘಟ್ಟದಲ್ಲಿ ದೈವದೊಡನೆ ಕನ್ನಡ ಭಾಷೆಯ ಮೂಲಕವೂ ಸಂವಾದ ಮಾಡಬಹುದು, ಅವನೊಂದಿಗೆ ಜನಸಾಮಾನ್ಯರ ಮಾತಿನಲ್ಲೇ ಸಂಭಾಷಣೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶರಣರು. ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯು ಮಾನವರನ್ನು ವರ್ಗ ವರ್ಗವಾಗಿ ಹಂಚಿತ್ತು. ಕೆಲವರು ಶುದ್ಧ, ಕೆಲವರು ಅಶುದ್ಧ ಎಂದು ಹೇಳಿದ್ದ ವ್ಯವಸ್ಥೆಗೆ ಶರಣರು ಧಿಕ್ಕಾರ ಹೇಳಿದರು. ಸಾಮಾಜಿಕ ಮೌಲ್ಯಗಳನ್ನೇ ಧಾರ್ಮಿಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಅಂದರೆ ಇಹಲೋಕದಲ್ಲಿ ನೀತಿಯುತವಾಗಿ, ದಯೆಯಿಂದ, ಕಾಯಕದಿಂದ, ಬಾಳಿ ಬದುಕಿದರೆ ಸ್ವರ್ಗ ಸ್ಥಿತಿ ಇಲ್ಲಿಯೇ…




Total views : 67060