ತತ್ವಪದಕಾರರು ಏಕಾಂಗಿ ಹೋರಾಟಗಾರರು | ಡಾ. ಸರ್ವಮಂಗಳ ಸಕ್ರಿ | ರಾಯಚೂರು.
ತತ್ವಪದಕಾರರು ಏಕಾಂಗಿ ಹೋರಾಟಗಾರರು. ಸಮಾಜದಲ್ಲಿ ಏಕ ವ್ಯಕ್ತಿಗಳಾಗಿ ಅನುಭಾವಿಕ ಬದುಕನ್ನು ಸ್ವೀಕರಿಸಿದವರು. ಸಮಾಜದಲ್ಲಿದ್ದ ಭ್ರಷ್ಟಾಚಾರ ಅಪ್ರಮಾಣಿಕತೆ ಜಾತೀಯತೆಯಂತ ಕರ್ಮಕಾಂಡಗಳಿಗೆ ಕಾರಣವಾಗುವ ಜನರಿಗೆ ತಮ್ಮ ಸನ್ನಡತೆಯ ಮೂಲಕ ನಡೆ ನುಡಿಯಲ್ಲೊಂದಾದ ಬದುಕನ್ನು ತೋರಿಸಿ ಕೊಟ್ಟರು. ತತ್ವ ವಿಚಾರಳಿಂದ ಸಮಾಜದ ಕಳಕಳಿ ಸಾದ್ಯ ಎಂಬುದು.. ದಿನ ನಿತ್ಯದ ಮೌಡ್ಯ ಆಚರಣೆಗಳಿಗೆ ವಿಡಂಬನೆಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಗಳಲ್ಲಿನ ಸಮಸ್ಯೆಗಳನ್ನು ಅರಿಯುವತ್ತ ಬಗೆಹರಿಸುವ ಪ್ರಯತ್ನ ಮಾಡಿದರು, ಪ್ರೇರೇಪಿಸಿದರು. ಇಂಥಹ ಜ್ವಲಂತ ಸಮಸ್ಯೆಗಳನ್ನು ಆರ್ಭಟವಿಲ್ಲದೆ, ಆಡಂಬರವಿಲ್ಲದೆ, ಅಹಂಕಾರ ಮುಕ್ತತೆಯಿಂದ ಸಹ ಚಿಂತನೆಗಳಿಂದ ಪ್ರಾಮಾಣಿಕವಾಗಿ ಬಿಡಿಸಿ ತೋರಿಸಿದರು. ಅನುಭಾವಿ ಬದುಕಿನ ಧಾರ್ಮಿಕ ಸಂಸ್ಕ್ರತಿಯ ಬೆಳವಣಿಗೆಗೆ ಕಾರಣರಾದರು.…