ಕಲ್ಯಾಣ ಕ್ರಾಂತಿ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ,ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,ನಾನು, ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ,ಕಲ್ಯಾಣವೆಂಬುದು ಪ್ರಣತೆಯಾಗಿತ್ತು,ನಾನು ತೈಲವಾದೇನು, ನೀವು ಬತ್ತಿಯಾದಿರಿ,ಪ್ರಭುದೇವರು ಜ್ಯೋತಿಯಾದರು,ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು,ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತಯ್ಯಾ,ನಮ್ಮ ಕೂಡಲಸಂಗಮ ಶರಣರ ಮನ ನೊಂದಿತ್ತಯ್ಯಾ. ಈ ವಚನ ಸಮಗ್ರ ವಚನ ಸಂಪುಟದಲ್ಲಿ ಇಲ್ಲ. ಇದು ಕಾಲಜ್ಞಾನದ ವಚನವೆಂದು ಮೊಟ್ಟ ಮೊದಲು ಉತ್ತಂಗಿ ಚೆನ್ನಪ್ಪನವರು ಕಲಬುರ್ಗಿಯಲ್ಲಿ ಜರುಗಿದ ಅಖಿಲ ಭಾರತ 32 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ಸಮ್ಮೇಳನ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-32ಸರ್ವಾಧ್ಯಕ್ಷರು…