“ಅಕ್ಷಯದ ಅಮರಜೀವಿ ಅನುಭಾವಿ ಬಸವಣ್ಣನವರು”/ ಡಾ.ದಾಕ್ಷಾಯಣಿ ಅಶೋಕ ಮಂಡಿ, ಮಹಾಲಿಂಗಪುರ.
ಸುಮಾರು 900 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಶಿವಶರಣರ ಆಂದೋಲನವು ಕೇವಲ ಧಾರ್ಮಿಕ ಆಯಾಮಕಷ್ಟೇ ಸೀಮಿತವಾಗದೇ ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತು ಎನ್ನುವುದು ಗಮನಾರ್ಹ ಸಂಗತಿ. ಅಂದು ವಚನಕಾರರು ವರ್ಣ-ವರ್ಗ-ಲಿಂಗ ಬೇಧಗಳನ್ನು ಹೋಗಲಾಡಿಸಿ ದೀನ ದಲಿತರ ಬದುಕಿಗೆ ಆಶಾಕಿರಣವಾದರು. ನವ ಸಮಾಜವೊಂದನ್ನು ನಿರ್ಮಿಸಿದರು. ಆತ್ಮವಿಶ್ವಾಸ ಮೂಡಿಸುವ ದಿಸೆಯಲ್ಲಿ ಜನಮಾನಸದ ಸಂಗಾತಿಗಳಾಗಿ ಮಾರ್ಗದರ್ಶಕರಾದರು. ಅವರು ರಚಿಸಿದ ವಚನವಾಙ್ಮಯ ಕನ್ನಡ ಪರಂಪರೆಯ ಅಪೂರ್ವ ಸಾಹಿತಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಪತ್ತು.12 ನೇ ಶತಮಾನದ ಸಾಹಿತ್ಯದಲ್ಲಿ ಒಂದು ಸುವರ್ಣ ಅಧ್ಯಾಯ. ಸಾಮಾಜಿಕ ಬದಲಾವಣೆಗೆ ಕಾರಣರಾದ ಮಹಾಚೇತನನ ನಮ್ಮಕ್ರಾಂತಿ ಪುರುಷ…