ಷಣ್ಮುಖಸ್ವಾಮಿಗಳ ವಚನ “ಎನ್ನ ಸ್ಥೂಲತನುವೆಂಬ ಮನೆಯಲ್ಲಿ”ವಚನ ವಿಶ್ಲೇಷಣೆ
ಎನ್ನ ಸ್ಥೂಲತನುವೆಂಬ ಮನೆಯಲ್ಲಿಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಸೂಕ್ಷ್ಮತನುವೆಂಬ ಮನೆಯಲ್ಲಿಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಕಾರಣ ತನುವೆಂಬ ಮನೆಯಲ್ಲಿಜ್ಞಾನವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಒಳಹೊರಗೆ ತುಂಬಿ ಬೆಳಗುವಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ.ಅಖಂಡೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1035 / ವಚನ ಸಂಖ್ಯೆ-237) ಬಸವೋತ್ತರ ಯುಗದ ಪ್ರಮುಖ ವಚನಕಾರರು ಶ್ರೀ ಷಣ್ಮುಖಸ್ವಾಮಿಗಳು. 17 ನೇ ಶತಮಾನದ ಅಂತ್ಯಭಾಗದಲ್ಲಿದ್ದ ಇವರ ಜೀವಿತದ ಕಾಲಘಟ್ಟ ಸುಮಾರು ಕ್ರಿ. ಶ. 1639 ರಿಂದ ಕ್ರಿ. ಶ. 1711 ಎಂದು ತಿಳಿದು ಬರುತ್ತದೆ. ಇವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರಾದ ಇವರ ತಂದೆ ಶರಣ ಮಲ್ಲಪ್ಪ ಶೆಟ್ಟಿ…