ಅಕ್ಕ ಮಹಾದೇವಿಯ ವ್ಯಕ್ತಿತ್ವ: ತಾತ್ವಿಕ ನಿಲುವುಗಳು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ತನು ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಮನ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಪ್ರಾಣ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳುಎನ್ನ ಒರೆದೊರೆದು ಆಗುಮಾಡಿದ ಕಾರಣಚೆನ್ನಮಲ್ಲಿಕಾರ್ಜುನಯ್ಯಾ,ನಿಮಗಾನು ತೊಡಿಗೆಯಾದೆನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-27) ತತ್ವನಿಷ್ಠೆ, ಜ್ಞಾನ, ವೈರಾಗ್ಯಗಳಿಂದ ಹಂಗಿನ ಅರಮನೆಯ ತೊರೆದು ಅರಿವಿನ ಮನೆಯತ್ತ ಪಯಣ ಬೆಳಸಿದ ಮಹಾ ಶಿವಯೋಗಿಣಿ, ತತ್ವ ಶಿಖಾಮಣಿ ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು ಈ ಭವಕ್ಕೆ ಬಂದ ಮಹಾ ಬೆಳಕು. ಸ್ತ್ರೀ ಕುಲರತ್ನ, ಸ್ತ್ರೀ ಕುಲದ ಸ್ವಾಭಿಮಾನದ ಪ್ರತೀಕವಾದ ಅಕ್ಕ ಮಹಾದೇವಿಯವರ ವ್ಯಕ್ತಿತ್ವವೇ ಅನುಪಮವಾದದು. ತನುವಿನೊಳೊಗಿದ್ದು ತನುವ…

0 Comments

ಬಸವಣ್ಣ ವೈಚಾರಿಕ ಚಿಂತಕ, ಪುರಾಣ ಪುರುಷನಲ್ಲ | ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಬಸವಣ್ಣನವರು ಪುರಾಣ ಪುರುಷನಲ್ಲ, ಪವಾಡ ಪುರುಷನಲ್ಲ, ಉದ್ಭವ ಮೂರ್ತಿಯಲ್ಲ. ಅವರು ಮೌಲ್ಯಗಳ ಮೊತ್ತ, ತತ್ತ್ವಗಳ ತೇಜ, ಆದರ್ಶಗಳ ಆಗರ, ಅರಿವಿನ ಓಗರ, ಆಚಾರದ ಅರಸ, ಅನುಭಾವದ ಶಿಖರವಾಗಿದ್ದಾರೆ. ಬಸವಣ್ಣನವರು ದಕ್ಷ ಆಡಳಿತಗಾರ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ನೈತಿಕತಜ್ಞ, ಸಂಘಟನಕಾರ, ಸಮಾನತೆಯ ಹರಿಕಾರ, ಸಮನ್ವಯತೆಯ ಸಾಧಕ, ಭಕ್ತಿ ಭಾಂಡಾರಿ, ಕಾಯಕಯೋಗಿ, ಮಹಾದಾಸೋಹಿ, ಅನುಭವ ಮಂಟಪವೆಂಬ ಧಾರ್ಮಿಕ ಸಂಸತ್‌ಶಿಲ್ಪಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಸಮಾಜ ಶಿಲ್ಪಿ, ದೈವತ್ವದೆಡೆಗಿನ ಶಬ್ದಸೋಪಾನ ಕಟ್ಟಿದ ವಚನಶಿಲ್ಪಿ, ಸತ್ಯಶೋಧಕ, ಶ್ರೇಷ್ಠ ತತ್ತ್ವಜ್ಞಾನಿ, ಮಹಾದಾರ್ಶನಿಕ, ಸಕಾರಾತ್ಮಕ ವಿಚಾರವಾದಿ, ವೈಜ್ಞಾನಿಕ ಮನೋಭಾವಿ ಮತ್ತು ವೈಚಾರಿಕ ಚಿಂತಕರಾಗಿದ್ದಾರೆ.…

0 Comments

ಸಾಂಸ್ಕೃತಿಕ ನಾಯಕ ಬಸವಣ್ಣ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ,ಬಸವಣ್ಣನೇ ಪರಮಬಂಧುವೆನಗೆ.ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798) ಶಿವಯೋಗಿ ಸಿದ್ಧರಾಮರ ಈ ವಚನದೊಂದಿಗೆ ಬಸವಾದಿ ಶಿವಶರಣರನ್ನು ಸ್ಮರಿಸುತ್ತ ಸರ್ವ ಶರಣ ಸಂಕುಲಕ್ಕೆ ಬಸವ ಜಯಂತಿಯ ಶುಭಾಶಯಗಳು ಬಸವ, ಬಸವಣ್ಣ, ಬಸವೇಶ್ವರ ಎಂಬ ಹೆಸರೇ ಒಂದು ಬಗೆಯ ರೋಮಾಂಚನ. ಸಮ ಸಮಾಜದ ಕನಸುಗಾರ, ಪ್ರಗತಿಪರ ಚಿಂತಕ, ಶರಣ ಪರಂಪರೆಯ ಹರಿಕಾರ ವಚನ ಸಾಹಿತ್ಯದ ನೇತಾರ. ಕನ್ನಡ ಭಾಷೆಗೆ ಅಸಾಮಾನ್ಯ ಶಕ್ತಿ ತುಂಬಿದ ವಿದ್ವಾಂಸ. ಜನರ ಆಡು ಭಾಷೆಯಲ್ಲಿ ವಚನಗಳ ಮೂಲಕ ಜನಪದವೂ ಬಸವಣ್ಣನೆ. ಹೀಗೆ ಬಸವಣ್ಣನವರು ನಮ್ಮ…

0 Comments

ಓಂ ಶ್ರೀ ಗುರು ಬಸವಲಿಂಗಾಯ ನಮಃ | ನಾವು ಮತ್ತು ನಮ್ಮ ಪ್ರಾರ್ಥನೆ | ಶ್ರೀ. ವಿಜಯ ತೇಲಿ, ಬೆಳಗಾವಿ

ಇಂದು ದೇಶ ವಿದೇಶಗಳೆಲ್ಲಡೆಯೂ ಶರಣ ಧರ್ಮ, ಶರಣ ಸಂಸ್ಕೃತಿ, ಶರಣ ಸಾಹಿತ್ಯ ಸಂಶೋಧನೆ, ವಚನ ತಾಡೋಲೆಗಳ ಡಿಜಿಟಲೀಕರಣ ಹೀಗೆ ಶರಣ ಧರ್ಮದ ವಿವಿಧ ಆಯಾಮಗಳ ಕುರಿತಾದ ಚರ್ಚೆ, ವ್ಯಾಖ್ಯಾನ, ವಿಚಾರ ಸಂಕೀರಣ, ಗ್ರಂಥ ಪ್ರಕಟಣೆಗಳು, Online Seminar ಗಳು ಹಾಗೂ Google Meet ಗಳಂತಹ ಚಟುವಟಿಕೆಗಳು ನಿತ್ಯವೂ ನಡೆಯುತ್ತಿವೆ. ಶರಣರ ವಚನಗಳು ಈಗಾಗಲೇ 37 ಕ್ಕಿಂತಲೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಇನ್ನೂ ನಡೆದಿವೆ. ಹೀಗೆ ಶರಣ ಧರ್ಮದ ಕುರಿತಾದ ಕಾರ್ಯಕ್ರಮ ಹಾಗೂ ವಿವಿಧ ಚಟುವಟಿಕೆಗಳ ವಾರ್ತೆಗಳು ಜಗತ್ತಿನಾದ್ಯಂತ ಪ್ರಸಾರವಾಗುತ್ತಿದೆ. ಶರಣ ಧರ್ಮದ ಉದ್ಧಾರಕ್ಕೆಂದೇ ಜಾಗತಿಕ ಮಟ್ಟದ…

0 Comments

ವೀಣಾ ಬನ್ನಂಜೆಯವರೆ ಶರಣರು ವೇದ, ಶಾಸ್ತ್ರಗಳನ್ನು ತಿರಸ್ಕರಿಸಲಿಲ್ಲವೆ? / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ-ಟ್ಯೂಬ್ ಚಾನಲ್‌ವೊಂದರಲ್ಲಿ “ಶ್ರೀಮದ್ಬಗವದ್ಗೀತೆ ಮತ್ತು ವಚನ” ಎಂಬ ವಿಷಯ ಕುರಿತು ವೀಣಾ ಬನ್ನಂಜೆ ಅವರು ಮಾತನಾಡುವಾಗ ಅಲ್ಲಮಪ್ರಭುದೇವರ ವಚನವೊಂದನ್ನು ವಿಶ್ಲೇಷಿಸಿದ ರೀತಿ ವ್ಯತಿರಿಕ್ತವಾಗಿದೆ. ಅಲ್ಲಮರ ವಚನ: ವೇದವೆಂಬುದು ಓದಿನ ಮಾತು;ಶಾಸ್ತ್ರವೆಂಬುದು ಸಂತೆಯ ಸುದ್ದಿ.ಪುರಾಣವೆಂಬುದು ಪುಂಡರ ಗೋಷ್ಠಿ.ಆಗಮವೆಂಬುದು ಅನೃತದ ನುಡಿ.ತರ್ಕವೆಂಬುದು ತಗರ ಹೋರಟೆ.ಭಕ್ತಿಯೆಂಬುದು ತೋರಿ ಉಂಬ ಲಾಭ.ಗುಹೇಶ್ವರನೆಂಬುದು ಮೀರಿದ ಘನವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465) ಈ ವಚನ ಕುರಿತು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು (ಅಲ್ಲಮಪ್ರಭುದೇವರ ವಚನ ನಿರ್ವಚನ ಸಂಪುಟ-2 ವಚನ ಸಂಖ್ಯೆ 464) ವಿಶ್ಲೇಷಿಸಿದ ರೀತಿ ಈ…

0 Comments

ಅಕ್ಕನ ಆಧ್ಯಾತ್ಮಿಕ ಆದರ್ಶ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಭಾರತೀಯ ಭಕ್ತಿ ಸಾಹಿತ್ಯದ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಚಂಪೂ ಸಾಹಿತ್ಯದ ನಂತರ ಸಾಮಾನ್ಯರಿಗೂ ಅರ್ಥವಾಗುವ ದೇಸೀ ಭಾಷೆಯಲ್ಲಿ ಸಮಾಜದ ಹತ್ತಿರಕ್ಕೆ ತಂದವರೆಂದರೆ ವಚನಕಾರರು. ಶರಣರ ನೇರ, ಸರಳ, ಭಕ್ತಿ ನಿಷ್ಠೆ ಈ ಎಲ್ಲಾ ಮೌಲ್ಯ ಆದರ್ಶಗಳು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಈ ಕಾಲ ಕ್ರಾಂತಿಯುಗವೂ ಹೌದು. ಭಕ್ತಿ ಚಳುವಳಿಯ ಕಾಲವೂ ಹೌದು. ಅಂದು ಭಾರತೀಯ ಚರಿತ್ರೆಯಲ್ಲಿ ನಿರಂತರವಾಗಿ ಮಹಿಳಾ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಅಕ್ಕ ಮಹಾದೇವಿ ಸ್ಥ್ರೀ ಶಕ್ತಿ ಪ್ರತೀಕವಾಗಿ ಪುರುಷ ಪ್ರಧಾನ ವ್ಯವಸ್ತೆಯನ್ನು ಕೆಡವಿ ಹೊಸ ಮುನ್ನುಡಿಗೆ…

0 Comments

ವಚನ ದರ್ಶನ: ದುರುದ್ದೇಶ ಬಿಂಬಿಸುವ ಪುಸ್ತಕ | ಡಾ. ಶಿವಾನಂದ ಜಾಮದಾರ, ಬೆಂಗಳೂರು.

“ವಚನ ದರ್ಶನ” ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಟಾಲಂನಿಂದ ಕಳೆದ ವರ್ಷದ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದೆಹಲಿಯಲ್ಲಿ ಅಪಾರ ಖರ್ಚಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಆ ಎಲ್ಲ ಸ್ಥಳಗಳಲ್ಲಿ ಸಂಘ ಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಈ ಪುಸ್ತಕವು ಸಂಘ ಪರಿವಾರದ ದುರುದ್ದೇಶ ಮತ್ತು ದುರುಳತನವನ್ನು ಬಿಂಬಿಸುತ್ತದೆ. ಈ ಕೃತಿಯ ಕುರಿತಾಗಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಿದೆ. ಮೊದಲನೆಯದು, “ವಚನ ದರ್ಶನ” ದ ಗೌರವ ಸಂಪಾದಕರಾಗಿರುವ ಸದಾಶಿವಾನಂದ ಸ್ವಾಮಿಗಳ ಯಾವುದೇ ಲೇಖನ, ಪ್ರಸ್ತಾವನೆ ಅಥವಾ ಮುನ್ನುಡಿ ಕೃತಿಯಲ್ಲಿ…

0 Comments

ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…

0 Comments

ಲಿಂಗಾಯತರ ಶಿವ ಅಂದರೆ ಯಾರು?  | ಡಾ. ವಿಜಯಕುಮಾರ ಕಮ್ಮಾರ, ತುಮಕೂರು

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.ಕೂಡಲಸಂಗಮದೇವಯ್ಯಾ,ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744) ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ. ಇಷ್ಟಲಿಂಗ ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397) ಬಸವಾದಿ ಶಿವಶರಣರ  ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ…

0 Comments