ಶಿವಯೋಗ / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.

ವಚನ ಸಾಹಿತ್ಯ ಶರಣರು ಸಾರಿದ ಮೌಲ್ಯಯುತ, ಘನತೆವೆತ್ತ ಸತ್ಯ ಸಂದೇಶ. ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಯುಕ್ತ ರೂಪ. ಜಗದೊಂದಿಗೆ ಅನುಶೃತಗೊಂಡ ಜಗದ್ವಂದ್ಯ ಮಾರ್ಗ. “ಲಿಂಗ ಮಧ್ಯೆ ಜಗತ್ ಸರ್ವಂ” ಎಂಬಂತೆ ಲಿಂಗದಲ್ಲಿಯೆ ಸರ್ವವನ್ನು ಕಂಡವರು, ಲಿಂಗವೆ ಸಂಗಯ್ಯನನ್ನು ಸೇರುವ ಮಾರ್ಗವೆಂದು ಅರಿತವರು ನಮ್ಮ ಶರಣರು. ಲಿಂಗನಿಷ್ಟೆಯಿಂದಲೆ ಜಗಕೆ ಮಾದರಿಯಾದವರು. ಅರುಹಿನ ಕುರುಹು “ಲಿಂಗ”. ಲಿಂಗಸಾಮರಸ್ಯದಿ ಪರಶಿವನ್ನು ಕೂಡುವ ಪರಿಯೆ ತ್ರಾಟಕ ಯೋಗ. ಅದುವೆ ಶಿವಯೋಗ. “ಯೋಗ” ಎಂಬ ಪದವು “ಯುಜ್” ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಅದಕ್ಕೆ ಕೂಟ (ಕೂಡುವದು, ಬೇರೆಯುವದು) ಎಂಬ…

0 Comments

ಶರಣರು ಕಂಡ ಶಿವರಾತ್ರಿ / ಅಮಂಗಳದಿಂದ ಮಂಗಳದ ಕಡೆಗೆ ಸಾಗುವುದೇ ಶಿವರಾತ್ರಿ

ನಾ ದೇವನಲ್ಲದೆ ನೀ ದೇವನೆ?ನೀ ದೇವನಾದಡೆ ಎನ್ನನೇಕೆ ಸಲಹೆ?ಆರೈದು ಒಂದು ಕುಡಿತೆ ಉದಕವನೆರೆವೆ,ಹಸಿವಾದಾಗ ಓಗರವನ್ನಿಕ್ಕುವೆ,ನಾ ದೇವ ಕಾಣಾ ಗುಹೇಶ್ವರಾ!(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-558) ಒಂದು ದೇವರ ಮೂರ್ತಿಯ ಎದುರಿಗೆ ನಿಂತು ಆ ದೇವರ ವಿಗ್ರಹಕ್ಕೆ ಸವಾಲು ಹಾಕಿರುವ ಅಲ್ಲಮಪ್ರಭುದೇವರ ವಚನ ಸಂಪೂರ್ಣವಾಗಿ ಪರಮ ಪೂಜ್ಯ ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರು ಪ್ರತಿವರ್ಷ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ದಾಸೋಹ ನೀಡಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡುವುದರ ಜೊತೆಗೆ ಪ್ರಸಾದ…

0 Comments

ಶರಣರ ಚಿಂತನೆಯ ಆಧುನಿಕತೆ / ಡಾ. ವೈ. ಎಂ. ಯಾಕೊಳ್ಳಿ ಸವದತ್ತಿ.

ನಮ್ಮ ಸಮಕಾಲೀನ ಬದುಕನ್ನು ಕುರಿತು ಚಿಂತಿಸಲಾರದ ಸಾಹಿತ್ಯ ಅರ್ಥಪೂರ್ಣ ಎನಿಸಲಾರದು. ಇಹದ ಮತ್ತು ಪರದ ಲೌಕಿಕ ಬದುಕಿನ ಬೇಸಾಯಗಾರರಾದ ಶರಣರು ತಮ್ಮ ವರ್ತಮಾನಕ್ಕೆ ಸ್ಪಂದಿಸಿ ಬದುಕಿದವರಾಗಿದ್ದವರು. ಹಾಗೆಯೇ ಬರೆದವರಾಗಿದ್ದರು. ಅಂತೆಯೇ ಅವರ ವಚನಗಳು ಅಂದಿಗೂ ಇಂದಿಗೂ ಮುಖ್ಯವೆನಿಸಿವೆ. ಶರಣರ ವಿಚಾರಗಳು ಇಂದಿನ ಆಧುನಿಕ ಜಗತ್ತಿನ ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಹಿರಿಯ ಸಾಹಿತಿಗಳಾದ ಡಾ. ದೇ. ಜವರೇಗೌಡ ಅವರು ಬಸವಣ್ಣನವರು ಒಂದೇ ಒಂದು ವಚನದಲ್ಲಿ ಸಾರಿರುವದನ್ನು ವಿವರಿಸಿದ್ದಾರೆ. ಸಧ್ಯದ ಬದುಕು ಸಾರ್ಥಕಗೊಳ್ಳುವ ಪರಿ ಯಾವುದು ಎಂಬುದನ್ನು ತಮ್ಮ ಸಪ್ತಸೂತ್ರಗಳನ್ನು ಸಮಾಹಿತಗೊಳಿಸಿರುವ “ಕಳಬೇಡ ಕೊಲಬೇಡ” ಎಂಬ ವಚನದಲ್ಲಿ…

0 Comments

ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ “ನೆಲದ ಮರೆಯಲಡಗಿದ ನಿಧಾನದಂತೆ” ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ, ಬೆಳಗಾವಿ ಜಿಲ್ಲೆ.

ನೆಲದ ಮರೆಯಲಡಗಿದ ನಿಧಾನದಂತೆ,ಮುಗಿಲ‌ ಮರೆಯಲಡಗಿದ ಮಿಂಚಿನಂತೆ,ಬಯಲ ಮರೆಯಲಡಗಿದ ಮರೀಚಿಯಂತೆಕಂಗಳ‌ ಮರೆಯಲಡಗಿದೆ ಬೆಳಗಿನಂತೆ-ಗುಹೇಶ್ವರಾ ನಿಮ್ಮ ನಿಲುವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-8/ವಚನ ಸಂಖ್ಯೆ-4) ದೈವದ ವಿಸ್ತಾರವನ್ನು ಶರಣರು ವಿವರಿಸಿದ ಹಾಗೆ ಮತ್ತಾರೂ ವಿವರಿಸಿಲ್ಲ. ಎಲ್ಲವೂ ಸಾಧ್ಯವಾಗುವದು ನಡೆಯುವದು, ನಿಲ್ಲುವದು ಪ್ರತಿಬಂಧಿಸುವದು ಇದೆಲ್ಲವೂ ದೈವದಿಂದಲೇ ಎಂದು ಶರಣರು‌ ಪ್ರಖರವಾಗಿ‌ ನಂಬಿದ್ದರು. ಇದನ್ನೆ ಸೃಷ್ಟಿ-ಸ್ಥಿತಿ-ಲಯ ಎನ್ನುವ ಪದಗಳಲ್ಲಿ ವಿವರಿಸಲಾಗುತ್ತದೆ ಈ‌ ಮೂರು‌ ಸಾಧ್ಯವಾಗುವದು ದೈವದಿಂದಲೇ‌ ಹೊರತು‌ ಬೇರಾರಿಂದಲೂ‌ ಸಾಧ್ಯವಿಲ್ಲ ಎನ್ನುವದು ಅವರ ದೃಢ ಅಭಿಪ್ರಾಯ. ನಮ್ಮ‌ ಕಣ್ಣಿನ‌ ಮಿತಿಗೆ ಸಿಗದ ವಿಸ್ತಾರ ದೈವದ್ದು ಎನ್ನುವ ಶರಣರು ಅದನ್ನು ಹಿಡಿಯಲಾಗದು ಎನ್ನುತ್ತಾರೆ. "ಆಕಾಶದಿಂದತ್ತ…

0 Comments

ವಚನ ಸಾಹಿತ್ಯದಲ್ಲಿ ಭಾಷೆ ಮತ್ತು ಭಾಷಾ ಸಂಸ್ಕೃತಿ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು

.ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆಕೊಟ್ಟಿಹೆನೆಂಬ ಶಬ್ದ ಅಳಿದರು ಉಳಿಯಿತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-250/ವಚನ ಸಂಖ್ಯೆ-682) ಶರಣ ಚಂದಿಮರಸರ ಈ ವಚನ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ವಿಶ್ಲೇಷಣೆ ಮಾಡುತ್ತಾ ಹೋದಂತೆ ಭಾಷೆ ಅಥವಾ ಮಾತು ಅಥವಾ ನುಡಿ ಎನ್ನುವ ಭಾಷಾ ಕ್ರಾಂತಿಯ ಗುಟ್ಟುಗಳನ್ನು ಮತ್ತು ತತ್ವಗಳನ್ನು ಅಡಗಿಸಿಕೊಂಡಂತೆ ಕಾಣುತ್ತದೆ. ಕೊಟ್ಟಿಹೆನೆಂಬ ಶಬ್ದ ಅಳಿದರೂ ಉಳಿಯಿತ್ತು ಎನ್ನುವುದರ ಮೂಲಕ ದಾಸೋಹ ತತ್ವದ ಪರಿಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸುತ್ತದೆ. ವಚನ ಸಾಹಿತ್ಯದ ಅಧ್ಯಯನ ಇಂದಿನ ಕಾಲಘಟ್ಟದ ಬಹಳಷ್ಟು ಉಪನ್ಯಾಸಕರನ್ನು, ವಿದ್ವಾಂಸರನ್ನು, ವಿದ್ಯಾರ್ಥಿಗಳನ್ನು…

1 Comment

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ | ಭಾಗ-03: ಭಾರತೀಯ ತರ್ಕಶಾಸ್ತ್ರ.

ತರ್ಕಶಾಸ್ತ್ರ ಎನ್ನುವದು ಅನಂತ ವ್ಯಾಪ್ತಿಯ ಅಧ್ಯಯನದ ವಿಷಯ. ಇದೂವರೆಗೂ ಕಂಡು ಬರುವ ಅಧ್ಯಯನಗಳು ಮತ್ತು ಸಂಶೋಧನೆಗಳು ಇದರ ಅಗಾಧತೆಯನ್ನು ತಿಳಿಸುತ್ತವೆ. ಭಾರತೀಯ ತರ್ಕಶಾಸ್ತ್ರವಂತೂ ಘನ ವಿದ್ವಾಂಸರುಗಳ ಪ್ರತಿಯೊಂದು ತರ್ಕಶಾಸ್ತ್ರದ ಅಧ್ಯಯನ ಮತ್ತು ವಿದ್ವಾಂಸರುಗಳ ಅಗಾಧ Galaxy. ಇದೊಂದು ಮುಗಿಯಲಾರದ ಅಧ್ಯಯನದ ವಿಷಯ. ಪಾಪ, Google - Search – Select – Copy – Paste ಮಾಡಿ ಒಂದು ಲೇಖನವನ್ನು ಪ್ರಸ್ತುತ ಪಡಿಸುವುದೇ ತನ್ನನ್ನು ತಾನು ಅಖಂಡ ಬ್ರಹ್ಮಾಂಡ ಪಂಡಿತನೆಂದು ಬಿಂಬಿಸುವ ಪ್ರಯತ್ನವನ್ನು ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ…

0 Comments

ವಚನ ಸಾಹಿತ್ಯದಲ್ಲಿ ಮಹಿಳೆ ಮತ್ತು ಕುಟುಂಬ/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಪುರುಷನ ಮುಂದೆ ಮಾಯೆಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.ಸ್ತ್ರೀಯ ಮುಂದೆ ಮಾಯೆಪುರುಷನೆಂಬ ಅಭಿಮಾನವಾಗಿ ಕಾಡುವುದು.ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯಮರುಳಾಗಿ ತೋರುವುದು.ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-98/ವಚನ ಸಂಖ್ಯೆ-278) ಮರ್ತ್ಯದ ಕತ್ತಲೆಯನ್ನು ಕಳೆದು ಅಜ್ಞಾನದಿಂದ ಸುಜ್ಞಾನದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತದಿಂದ ಅಮೃತದೆಡೆಗೆ ನಡೆಸಿದ ನಾಡು ಕಂಡ ಚೇತನ ಶಕ್ತಿಗಳು ಬಸವಾದಿ ಶಿವಶರಣರು. ಮನುಷ್ಯತ್ವದ ನಿಜ ನೆಲೆಯನ್ನು ಅರುಹಿ, ಮಾನವತ್ವದ ಮಹಾಬೆಳಗಿನೊಳಗೆ ಸಕಲ ಚೇತನರನ್ನೂ ದೇವನನ್ನಾಗಿ ಕಂಡ ದಿವ್ಯಾತ್ಮರು, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಸಮ ಸಮಾಜ ಕಟ್ಟಲು ಮುಂದಾದ ಹರಿಕಾರರು ಬಸವಾದಿ ಶಿವಶರಣರು…

1 Comment

ವೀರಗಂಟಿ ಶರಣ ಮಡಿವಾಳ ಮಾಚಿದೇವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು. ಅತ್ಯಂತ ಶ್ರೇಷ್ಠ ಕಾಯಕ…

0 Comments

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ.ಭಾಗ-02: ಅರ್ಧಸತ್ಯ

. Every lie is two lies: The lie we tell others and The lie we tell ourselves to justify it.There is a story to justify this. A Woman walks into a butcher shop just before closing time and asks, do you still have chicken? The butcher opens his deep freezer, takes out his only chicken left and puts it on the weighing…

0 Comments