ಮಹೇಶ್ವರಸ್ಥಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಧಾರ್ಮಿಕ ಮತ್ತು ವೈಚಾರಿಕ ನಿರ್ಣಯಗಳ ಒಟ್ಟು ಮೊತ್ತ ಮಹೇಶ್ವರಸ್ಥಲದಲ್ಲಿದೆ. ನಿಷ್ಠೆಯಿಂದ ಕೂಡಿದ ಭಕ್ತಿ. ಧರ್ಮದ ಕೊಡುಗೆ ಸುಬುದ್ದಿಯ ಮೂಲಕ ವೀರ ವ್ರತಾಚರಣೆಯನ್ನು ಗುರು-ಲಿಂಗಕ್ಕೆ ಅರ್ಪಿಸುವ ಉಪಾಸನೆಯನ್ನು ಮಹೇಶ್ವರಸ್ಥಲದಲ್ಲಿ ಮಾಡಬೇಕಾಗುತ್ತದೆ. ಮಹೇಶ್ವರನು ಸುಳ್ಳು ಹೇಳುವುದಿಲ್ಲ, ಆಚಾರವನ್ನು ಬಿಡುವುದಿಲ್ಲ. ಇತರರನ್ನು ಹಿಂಸಿಸುವುದಿಲ್ಲ. ಪರಧನ, ಪರಸ್ತ್ರೀ, ಪರನಿಂದೆಗಳನ್ನು ಸಹಿಸದ ಭಕ್ತನಾಗಿರಬೇಕು. ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕು. ಶುದ್ಧ ಮನಸ್ಸುಳ್ಳ ಮಹೇಶ್ವರಸ್ಥಲದಲ್ಲಿ ಮನ ಮತ್ತು ಇಂದ್ರಿಯ ಬೇರೆಡೆಗೆ ಹೋಗದಂತೆ ಗಟ್ಟಿಯಾಗಿ ಹಿಡಿದಿಡುವ ಪ್ರಯತ್ನ ಈ ಸ್ಥಲದಲ್ಲಿದೆ. ಲಿಂಗದಲ್ಲಿ ಪ್ರೇಮ, ಜಂಗಮದಲ್ಲಿ ದಾಸೋಹ, ಗುರು ಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿದ ಭಕ್ತನಾಗಿರಬೇಕು.…