ಬಸವಣ್ಣನವರ ದೃಷ್ಟಿಯಲ್ಲಿ ದೇವರು / ಶ್ರೀಮತಿ. ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ.
ಬಸವಣ್ಣನವರು ವಿಶ್ವದ ಮಹಾನ್ ಚಿಂತಕರ ಗುಣ ವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ. ಆರ್ಥರ್ ಮೈಲ್ಸ್ ಹೇಳುವಂತೆ: ಅವರು 'ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ'. ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಾಮಾಜಿಕ ಚಿಂತನೆ, ಮಾರ್ಕ್ಸ್ ನ ಆರ್ಥಿಕ ನೀತಿ - ಈ ಎಲ್ಲವನ್ನೂ ಏಕೀಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ 'ಸಮಾಜ ಪರಿವರ್ತಕರು ' ಅನ್ನುವುದು ಸೂಕ್ತ. ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂತಹ ವಸ್ತುವಿನ ಕುರಿತು…