ಆಡುವಡೆ ಸದಾಚಾರಿಗಳ ಕೂಡೆ ಆಡುವುದು: ಶರಣ ಬಹುರೂಪಿ ಚೌಡಯ್ಯನವರ ವಚನ / ಡಾ. ಪ್ರದೀಪಕುಮಾರ ಹೆಬ್ರಿ, ಮಂಡ್ಯ.
ಆಡುವಡೆ ಸದಾಚಾರಿಗಳ ಕೂಡೆ ಆಡುವುದು.ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು.ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು.ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾರೇಕಣ್ಣಪ್ರಿಯ ನಾಗಿನಾಥಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1370 / ವಚನ ಸಂಖ್ಯೆ-131) ಇದು ಬಹುರೂಪಿ ಚೌಡಯ್ಯನವರ ವಚನ. ಇವರು ಬಹುರೂಪಿ ಕಾಯಕದ ಜನಪದ ಕಲಾವಿದರು. ರೇಕಳಿಕೆ ಗ್ರಾಮದಲ್ಲಿ ಹುಟ್ಟಿದ ಇವರ ಕಾರ್ಯಕ್ಷೇತ್ರ ಕಲ್ಯಾಣ, 'ರೇಕಣ್ಣಪ್ರಿಯ ನಾಗಿನಾಥಾ' ಇವರ ಅಂಕಿತ. ಇದು ಇವರ ದೀಕ್ಷಾಗುರು ರೇಕನಾಥ, ಜ್ಞಾನಗುರು ನಾಗಿನಾಥರ ಸಂಯುಕ್ತ ಹೆಸರಿನಿಂದ ಕೂಡಿದುದು. ಬಸವಣ್ಣನವರೆಂದರೆ ಇವರಿಗೆ ಪಂಚಪ್ರಾಣ. ಇವರ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ, ಶರಣ ವಿಧೇಯತೆ, ಜಂಗಮ ನಿಷ್ಠೆ, ನೇರ ಹಾಗೂ ನಿಷ್ಠೂರ ಸ್ವಭಾವಗಳು ಕಂಡುಬರುತ್ತವೆ.…