ಶರಣ ಕಿನ್ನರಿ ಬ್ರಹ್ಮಯ್ಯನವರ ಬದುಕು ಬರಹ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)
ಕಿನ್ನರಿ ಬ್ರಹ್ಮಯ್ಯನವರು 12 ನೇ ಶತಮಾನದ ಶರಣ ಸಮೂಹದಲ್ಲಿ ಗುರುತಿಸಿಕೊಂಡಂಥ ಶರಣರು. ಇವರ ಹುಟ್ಟೂರು ಈಗಿನ ತೆಲಂಗಾಣದ ಪೂಡೂರು ಅನ್ನುವಂಥ ಗ್ರಾಮ. ಇವರ ತಾಯಿ ಕಲಿದೇವಿ. ಇವರು ಅಕ್ಕಸಾಲಿಗ ವೃತ್ತಿಯನ್ನು ಕೈಗೊಂಡಿರುತ್ತಾರೆ. ಅದರ ಜೊತೆ ಜೊತೆಗೆ ದಾಸೋಹವನ್ನು ಕೂಡ ಮಾಡುತ್ತಿರುತ್ತಾರೆ. ಒಮ್ಮೆ ತೂಕದಲ್ಲಿ ಚಿನ್ನವನ್ನು ಕಡಿಮೆ ತೂಗಿ ಮೋಸ ಮಾಡಿದ್ದಾರೆ ಅನ್ನುವ ಆಪಾದನೆಗೊಳಗಾದರು. ಆಗ ಇದು ಆ ಶಿವನದೇ ಇಚ್ಛೆ ಆಗಿರಬೇಕು ಎಂದು ಅಕ್ಕಸಾಲಿಗ ಕಾಯಕವನ್ನು ಬಿಟ್ಟು ಕಿನ್ನರಿ ಬಾರಿಸುವ ಕಾಯಕವನ್ನು ಕೈಗೊಳ್ಳುವರು. ಬಸವಣ್ಣನವರ ಹಿರಿಮೆಯ ಬಗೆಗೆ ಸಾಕಷ್ಟು ಕೇಳಿ ಅವರನ್ನು ಕಾಣಲು ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ…