ಶ್ರೀ ಸಿದ್ದಗಂಗಾ ಮಠ-ತುಮಕೂರಿನ ಹಳೆಯ ವಿದ್ಯಾರ್ಥಿಯೊಬ್ಬನ ನೆನಪುಗಳು / ಡಾ. ಎಮ್. ಎನ್, ಚನ್ನಬಸಪ್ಪ, ತುಮಕೂರು.
ಅಮೃತ ಗಂಗಾ: ಅಮೃತ ಮಹೋತ್ಸವದ ವಿಶೇಷ ಸಂಚಿಕೆಯಲ್ಲಿ ಡಾ. ಎಂ.ಎನ್. ಚನ್ನಬಸಪ್ಪ, ಪ್ರಾಂಶುಪಾಲರು, ಎಸ್.ಐ. ಟಿ., ತುಮಕೂರು ಇವರು ಬರೆದ ಲೇಖನ. ಕೆಲವು ಸ್ನೇಹಿತರು ನನ್ನ ಬಗ್ಗೆ ನೀನು ತುಂಬಾ ಅದೃಷ್ಟವಂತ ಎಂದು ಹೇಳುತ್ತಾರೆ. ಇದು ನಿಜ. ನಮ್ಮ ಊರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಾಡರಹಳ್ಳಿ. 1940 ರ ದಶಕದಲ್ಲಿ ನಮ್ಮ ಹಳ್ಳಿಯ ಮಟ್ಟಕ್ಕೆ ಹೋಲಿಸಿದರೆ ನಮ್ಮದು ಮಧ್ಯಮ ವರ್ಗದ ಕುಟುಂಬ ಅನ್ನಬಹುದಾಗಿತ್ತು. ಬೆಂಗಳೂರಿನ ಆರ್. ವಿ. ವಿದ್ಯಾ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಕಾರಣಕರ್ತರಾದ ಶ್ರೀ ಎಂ. ಸಿ. ಶಿವಾನಂದಶರ್ಮರು (ಅವರ ಪೂರ್ವ…