ಹೊರಗಲ್ಲ; ಇಲ್ಲೇ ಇದೆ ಎಲ್ಲ! / (ವಿಕಾಸವಾದದ ಮೂಲ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ
ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-433/ವಚನ ಸಂಖ್ಯೆ-1233)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಪರಿಣತೆ: ಅಂತಿಮ ಪರಿಣಾಮ, ಪಲಿತಾಂಶ. ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು…