ಡಾ. ಬಸವರಾಜ ಅನಗವಾಡಿಯವರು ನಿರ್ಮಿಸಿದ “ಬಸವ ಶರಣ ಕಲಾ ಸಂಗ್ರಹಾಲಯ” | ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಮುಖ್ಯರಸ್ತೆಯಲ್ಲಿ “ಬಸವ ಶರಣ ಕಲಾ ಸಂಗ್ರಹಾಲಯ” ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದರೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳನ್ನು ಕಾಣಬಹುದು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ಅಲ್ಲಿನ ಬೆಳಕಿನ ವ್ಯವಸ್ಥೆ ಚಿತ್ರ-ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ Design ಮಾಡಲಾಗಿದೆ. ಇದು ನಮ್ಮನ್ನು 12…