Mystic Messiah Allama Prabhu Vachana Analysis | ಆರೂ ಇಲ್ಲದ ಅರಣ್ಯದೊಳಗೆ | Shri. Vishwanand Pattanashetty | Sunnyvale | California 94086.

ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ!ಆ ಉರಿಯೊಳಗೆ ಮನೆ ಬೇವಲ್ಲಿ,ಮನೆಯೊಡೆಯನೆತ್ತ ಹೋದನೊ?ಆ ಉರಿಯೊಳಗೆ ಬೆಂದ ಮನೆ,ಚೇಗೆಯಾಗುದದ ಕಂಡು,ಮನೆಯೊಡೆಯನಳಲುತ್ತ ಬಳಲುತ್ತೈದಾನೆ.ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕಂಡು,ಮನದಲ್ಲಿ ಹೇಸಿ ತೊಲಗಿದೆನಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-76)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಚೇಗೆ: ಹಾನಿ, ಭಂಗ, ಕೇಡು.ಠಾವ: ಸ್ಥಾನ, ಸ್ಥಳ. Transliteration:Aaroo illada aranyadolage Maneya kattidare,Kaadugichchu eddubandu hattittalla!Aa uriyolage mane bevalli,Maneyodeyanetta hodano?Aa uriyolage benda mane,Chegeyaduda kandu,Maneyodeyanalalutta balaluttaidaanai.Guheshwara, nimma olavillada thava kandu,Manadalli hesi tolagidenayya. Translation:When building a…

1 Comment

ಶರಣ ಕಿನ್ನರಿ ಬ್ರಹ್ಮಯ್ಯನವರ ಬದುಕು ಬರಹ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

ಕಿನ್ನರಿ ಬ್ರಹ್ಮಯ್ಯನವರು 12 ನೇ ಶತಮಾನದ ಶರಣ ಸಮೂಹದಲ್ಲಿ ಗುರುತಿಸಿಕೊಂಡಂಥ ಶರಣರು. ಇವರ ಹುಟ್ಟೂರು ಈಗಿನ ತೆಲಂಗಾಣದ ಪೂಡೂರು ಅನ್ನುವಂಥ ಗ್ರಾಮ. ಇವರ ತಾಯಿ ಕಲಿದೇವಿ. ಇವರು ಅಕ್ಕಸಾಲಿಗ ವೃತ್ತಿಯನ್ನು ಕೈಗೊಂಡಿರುತ್ತಾರೆ. ಅದರ ಜೊತೆ ಜೊತೆಗೆ ದಾಸೋಹವನ್ನು ಕೂಡ ಮಾಡುತ್ತಿರುತ್ತಾರೆ. ಒಮ್ಮೆ ತೂಕದಲ್ಲಿ ಚಿನ್ನವನ್ನು ಕಡಿಮೆ ತೂಗಿ ಮೋಸ ಮಾಡಿದ್ದಾರೆ ಅನ್ನುವ ಆಪಾದನೆಗೊಳಗಾದರು. ಆಗ ಇದು ಆ ಶಿವನದೇ ಇಚ್ಛೆ ಆಗಿರಬೇಕು ಎಂದು ಅಕ್ಕಸಾಲಿಗ ಕಾಯಕವನ್ನು ಬಿಟ್ಟು ಕಿನ್ನರಿ ಬಾರಿಸುವ ಕಾಯಕವನ್ನು ಕೈಗೊಳ್ಳುವರು. ಬಸವಣ್ಣನವರ ಹಿರಿಮೆಯ ಬಗೆಗೆ ಸಾಕಷ್ಟು ಕೇಳಿ ಅವರನ್ನು ಕಾಣಲು ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ…

0 Comments

ಅಣ್ಣನು ನಮ್ಮ ಬೊಮ್ಮಯ್ಯ | ಡಾ. ಶಿವಗಂಗಾ ರಂಜಣಗಿ, ಹುನಗುಂದ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

12 ನೇ ಶತಮಾನ ಒಂದು ಅದ್ಭುತ ಕಾಲ ಘಟ್ಟ. ಶರಣರ ನಡೆ - ನುಡಿ - ವಚನ ಪ್ರತಿಯೊಂದು ಆದರ್ಶ. ದೊರೆತಿರುವ ಆಧಾರಗಳು ಕೆಲವಾದರೆ ಕಾಲ ಗರ್ಭದಲ್ಲಿ ಅಡಗಿರುವ ಸತ್ಯಾಂಶಗಳೆಷ್ಟೋ ಇವೆ. ಯಾವುದೇ ಶರಣರು ತಮ್ಮ ಜೀವನವನ್ನು ಕುರಿತು ಹೇಳಿಕೊಂಡಿಲ್ಲ ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು, ವ್ಯಕ್ತಿಗಿಂತ ಸಮಾಜದ ಹಿತ ದೊಡ್ಡದು. ಶರಣರು ಸರ್ವರ ಏಳಿಗಾಗಿ ಸರ್ವೋದಯದ ತತ್ವವನ್ನು ಅಳವಡಿಸಿಕೊಂಡವರು. ಬಸವಾದಿ ಶರಣರು “ಇರುವ ಕೆಲಸವ ಮಾಡು ಕಿರಿದೆನದೆ, ದೊರೆತುದುದು. ಪ್ರಸಾದವೆಂದುಣ್ಣು” ಎಂಬ ನುಡಿಯಂತೆ ಕೈಲಾಸಕ್ಕಿಂತ ಕಾಯಕವನ್ನು ದೊಡ್ಡದನ್ನಾಗಿ ಮಾಡಿಕೊಂಡಿದ್ದರು. ಅವರ ಕಾಯಕದಿಂದಲೇ ಶರಣರನ್ನು ಗುರುತಿಸುತ್ತೇವೆ. ಅನೇಕ ಶರಣರ…

0 Comments

ಶರಣ ಮಡಿವಾಳ ಮಾಚಿದೇವರ ವಚನಗಳಲ್ಲಿ ಲಿಂಗಾಚಾರ/ಡಾ. ಸರ್ವಮಂಗಳ ಸಕ್ರಿ.ರಾಯಚೂರು.

ವಚನ ಸಂಸ್ಕತಿಯನ್ನು ಗ್ರಹಿಸುವ ಹಿನ್ನೆಲೆಯಲ್ಲಿ ಧರ್ಮದ ಒಳ ಸೂಕ್ಷ್ಮಗಳು ಮತ್ತು ಭಕ್ತಿ ಸಿದ್ದಾಂತಗಳು ನಮಗೆ ಮುಖಾಮುಖಿಯಾಗುತ್ತವೆ. ನಿಜವಾದ ಅರ್ಥದಲ್ಲಿ ಧರ್ಮವೆಂಬುದು ಆದರ್ಶಗಳ ಮೊತ್ತ. ಮಾನವ ಜನಾಂಗದ ಆದರ್ಶಗಳು ಧರ್ಮ ತತ್ವಗಳ ನೆಲೆಯಲ್ಲಿ ಮಾತನಾಡುತ್ತವೆ. ಉದಾರತೆ, ಸಮತಾ ಭಾವ, ಮಾನವೀಯತೆ ಸಕಲರನ್ನು ಒಂದೇ ಎಂದು ಭಾವಿಸುವ ಗುಣ ಶರಣ ಧರ್ಮಕ್ಕೆ ಇರುವ ವಿಶೇಷತೆ. ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಲಿಂಗಾಚಾರಕ್ಕೆ ಲಿಂಗಾಂಗ ಸಾಮರಸ್ಯವೆಂದು ಕರೆದರು. ಇಷ್ಟಲಿಂಗವೇ ಆಂತರಿಕ ಪರಮ ಸಾಧನೆ ಎಂದರು. ಧಾರ್ಮಿಕ ಸಾಧನೆಯ ಅರಂಭದಿಂದ ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಬಾಜ್ಯ ಅಂಗವಾಯಿತು. ಹೀಗಾಗಿ ಇಷ್ಟಲಿಂಗ…

0 Comments

ಮಹಾ ಪ್ರಸಾದಿ ಶರಣ ಮರುಳಶಂಕರದೇವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಆಕಾರವೆಂಬೆನೆ ನಿರಾಕಾರವಾಗಿದೆನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.ತನ್ನನಳಿದು ನಿಜವುಳಿದಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡುಬದುಕಿದೆನು ಕಾಣಾ ಸಂಗನಬಸವಣ್ಣಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50) ಶರಣ ಕಿನ್ನರಿ ಬ್ರಹ್ಮಯ್ಯನವರ ಈ ವಚನ ಶರಣ ಮರುಳಶಂಕರದೇವರ ಘನವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲಶೃತಿಯಿಂದ ಹಲವಾರು ಶರಣರು ವಿವಿಧ ಸ್ಥಳಗಳಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಶರಣರಲ್ಲಿ ಅಫಘಾನಿಸ್ತಾನದಿಂದ ಬಂದ ಮರುಳಶಂಕರದೇವರು ಪ್ರಮುಖರು. ಕಲ್ಯಾಣದ ಮಹಾಮನೆಯಲ್ಲಿ ಅಜ್ಞಾತವಾಗಿ ಬದುಕಿದ್ದ ಶರಣ ಮರುಳಶಂಕರದೇವರನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಗುರುತಿಸುತ್ತಾರೆ. ಅಲ್ಲಮ ಪ್ರಭುಗಳ ಒಂದು ವಿಶೇಷತೆ ಅಂದರೆ ಅವರ ಲೋಕ…

0 Comments

ಅನುಪಮ ವರಕವಿ ಡಾ. ದ. ರಾ. ಬೇಂದ್ರೆಯವರ ಬದುಕು ಬರಹ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಆಕಾಶವಾಣಿಯ ಒಂದು ಸಂದರ್ಶನದಲ್ಲಿ ನಿರೂಪಕರು ಅಜ್ಜಾರ “ನಿಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಉತ್ಕೃಷ್ಠವಾಗಿ ಬರಿತೀರಿ ಹೆಂಗ” ಅಂತ ಒಂದು ಪ್ರಶ್ನೆಯನ್ನು ಕೇಳತಾರ. ಅದಕ್ಕ ಬೇಂದ್ರೆ ಅಜ್ಜಾರು ಕೊಟ್ಟ ಅನುಪಮ ಉತ್ತರ ಕೇಳಿ ನಿರೂಪರು ಒಂದು ಕ್ಷಣ ಮೂಕವಿಸ್ಮಿತರಾದರು. “ಕನ್ನಡದಾಗ ಚುಲೋತ್ನಂಗ ಬರೀತೇನಂದರ ಅದಕ ಕಾರಣ ಬರಿಯಾಕ ಕನ್ನಡಾನ ಅಷ್ಟು ಚುಲೋ ಐತಿ, ಅದಕ ಆ ಸಾಹಿತ್ಯ ಅಷ್ಟು ಉತ್ಕೃಷ್ಠ ಆಕ್ಕೇತಿ” ಇಂಥ ಅದ್ಭುತ ಕಾವ್ಯ ಗಾರುಡಿಗ ಮತ್ತು ಕನ್ನಡಿಗರ ಮನೆ ಮಾತಾಗಿರುವ ಡಾ. ದ. ರಾ. ಬೇಂದ್ರೆಯವರ ಜನ್ಮದಿನ ಜನೇವರಿ 31. ಇದರ ಪ್ರಯುಕ್ತ ಈ ಲೇಖನ.…

0 Comments

ಆದ್ಯ ವಚನಕಾರ ಶರಣ ಜೇಡರ ದಾಸಿಮಯ್ಯನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12 ನೇ ಶತಮಾನವು ಒಂದು ವಿಶಿಷ್ಟ ಕಾಲಘಟ್ಟ. ಆ ಕಾಲಘಟ್ಟದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗಳು ವಿಶಿಷ್ಟತೆಗೆ ಕಾರಣಗಳು. ಧರ್ಮ, ದರ್ಶನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಾದಿ ಶರಣರ ವಚನಗಳಿಗೆ ಮಹತ್ವದ ಸ್ಥಾನವಿದೆ. ಶಿವ ಶರಣರ ಜೀವನ ಬಹುಮುಖಿಯಾದುದು. ಅವರು ಒಂದೆಡೆ ಸಾಧಕರು ಇನ್ನೊಂದೆಡೆ ಸಮ-ಸಮಾಜದ ನಿರ್ಮಾಪಕರು. ಇಂತಹ ಅಗ್ರಗಣ್ಯ ಶಿವಶರಣರಲ್ಲಿ ಶರಣ ಜೇಡರ ದಾಸಿಮಯ್ಯನವರೂ ಒಬ್ಬರು. ಬಸವಣ್ಣನವರ ಹಿರಿಯ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಕಂಡು ಬರುವಂತೆ ಬಸವಣ್ಣವರಿಗಿಂತ ಮುಂಚಿತವಾಗಿ ವಚನಗಳನ್ನು ರಚಿಸಿದ ಶರಣ ಜೇಡರ ದಾಸಿಮಯ್ಯನವರು ಒಬ್ಬ ಅದ್ಭುತ…

0 Comments

ನಾ ಬರಿ ಭ್ರೂಣವಲ್ಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತುತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತುತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತುತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತುಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-608) 12 ನೇ ಶತಮಾನದಲ್ಲಿಯೇ ಶಿವಯೋಗಿ ಸಿದ್ಧರಾಮೇಶ್ವರರು ಮಹಿಳಾ ಶಕ್ತಿಯನ್ನು ಗುರುತಿಸಿ ಗೌರವಿಸಿದ ನಿಜ ಶರಣರು. ಹೆಣ್ಣು ಈ ಸೃಷ್ಠಿಯ ಒಂದು ಭಾಗ. ಮಾನವರು ಎಂಬ ಜನಾಂಗದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು. ಪುರುಷನ ಕೊಡುಗೆಯಷ್ಟೇ ಮಹಿಳೆಯ ಕೊಡುಗೆಯೂ ಕೂಡ ಮನುಕುಲದ ಬೆಳವಣಿಗೆಗೆ ಶ್ರೇಷ್ಠವಾಗಿದೆ.…

0 Comments

ಧೀರ ಶರಣ ಅಂಬಿಗರ ಚೌಡಯ್ಯನವರು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರ.

ಅಂಬಿಗರ ಚೌಡಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ಚೌಡಯ್ಯನವರ ಕಾಯಕ ದೋಣಿ ನಡೆಸುವುದು. ಬಸವಾದಿ ಶರಣರ ಲಿಂಗ ತತ್ವವನ್ನು ಶ್ರದ್ಧೆಯಿಂದ ಪಾಲಿಸಿ ಲಿಂಗಾಂಗ ಸಾಮರಸ್ಯ ಸಂಪಾದಿಸಿದ ಚೌಡಯ್ಯನವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ಅಂಬಿಗರ ಚೌಡಯ್ಯನವರ ವಚನಗಳು ನಿರ್ಭೀತಿಯಿಂದ ಕಂಡದ್ದನ್ನು ಕಂಡಂತೆಯೇ, ಮುಚ್ಚುಮರೆ ಇಲ್ಲದೆ ಎಚ್ಚರಿಸುವಂಥವು. ಆಡಂಬರ, ಡಂಭಾಚಾರ, ಮೂಢನಂಬಿಕೆಗಳನ್ನು ಕಂಡರೆ ಕಟು ಮಾತುಗಳಲ್ಲಿ ನಿಂದಿಸಿ ‌ಸರಿ ದಾರಿಗೆ ತರುವ ಹಾಗೂ ದಾರಿ ತಪ್ಪಿದ ಯಾರನ್ನು ಬಿಡದೆ ತಪ್ಪು ದಾರಿಗಳೆವ ಗುರುಗಳನ್ನು ಟೀಕಿಸುತ್ತಿದ್ದರು. ಆದರೆ ಅವರ ಮಾತುಗಳಲ್ಲಿ ದ್ವೇಷ ಅಸೂಯೆಗಳಿರಲಿಲ್ಲ. ತಿದ್ದಿ ಸತ್ಯದ ಆಚರಣೆಗೆ ತರುತ್ತಿದ್ದರು. ತಮ್ಮ ಆಚಾರ ವಿಚಾರ…

0 Comments