ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನಗಳಲ್ಲಿ “ಮಾಯೆ” | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ. 12 ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ಕರ್ನಾಟಕವು ಅಭೂತಪೂರ್ವ ಅನುಪಮ ಮಹಿಳಾ ವಚನಕಾರ್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧಾರ್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ…