ಶ್ರಾವಣ ವಚನ ಚಿಂತನ-06: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?ಇಂತೀ ಮೃತ್ಯುವಿನ ಬಾಯ ತುತ್ತಾದ,ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73) ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು…