ಬಸವಣ್ಣನವರ ವಚನ “ಶರಣ ನಿದ್ರೆಗೈದೊಡೆ ಜಪ ಕಾಣಿರೋ”ವಚನ ವಿಶ್ಲೇಷಣೆ
ಶರಣ ನಿದ್ರೆಗೈದಡೆ ಜಪ ಕಾಣಿರೊ,ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,ಶರಣ ನಡೆದುದೆ ಪಾವನ ಕಾಣಿರೊ,ಶರಣ ನುಡಿದುದೆ ಶಿವತತ್ವ ಕಾಣಿರೊ,ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ!(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-78 / ವಚನ ಸಂಖ್ಯೆ-873) ಶರಣನ ಶರಣಸ್ಥಲದ ವಿವರಣೆ ಇರುವ ಈ ವಚನ ಬಸವಣ್ಣನವರ ಬೆಡಗಿನ ಹಾಗೂ ಟೀಕಿನ ವಚನಗಳಲ್ಲೊಂದು. ಈ ವಚನದಲ್ಲಿ ಶರಣ, ನಿದ್ರೆ, ಜಪ, ತಪ, ಶಿವರಾತ್ರಿ, ನಡೆದುದು, ನುಡಿದುದು ಮತ್ತು ಕಾಯ ಕೈಲಾಸ ಎನ್ನುವ ಶಬ್ದಗಳನ್ನು ಬಳಸಿದ್ದಾರೆ. ಮಾನವನಾಗಿ ಮರ್ತ್ಯಕ್ಕೆ ಆಗಮಿಸಿ ಶಿವಜ್ಞಾನ ಸಂಪನ್ನನಾಗಿ ಮಹದೇವನಾಗಿ ಮಹದಲ್ಲಿ ನಿಂದವನೇ ಶರಣ. ಅರಿವನ್ನೆ…