ವಚನ ದರ್ಶನ: ದುರುದ್ದೇಶ ಬಿಂಬಿಸುವ ಪುಸ್ತಕ | ಡಾ. ಶಿವಾನಂದ ಜಾಮದಾರ, ಬೆಂಗಳೂರು.
“ವಚನ ದರ್ಶನ” ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಟಾಲಂನಿಂದ ಕಳೆದ ವರ್ಷದ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದೆಹಲಿಯಲ್ಲಿ ಅಪಾರ ಖರ್ಚಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಆ ಎಲ್ಲ ಸ್ಥಳಗಳಲ್ಲಿ ಸಂಘ ಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಈ ಪುಸ್ತಕವು ಸಂಘ ಪರಿವಾರದ ದುರುದ್ದೇಶ ಮತ್ತು ದುರುಳತನವನ್ನು ಬಿಂಬಿಸುತ್ತದೆ. ಈ ಕೃತಿಯ ಕುರಿತಾಗಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಿದೆ. ಮೊದಲನೆಯದು, “ವಚನ ದರ್ಶನ” ದ ಗೌರವ ಸಂಪಾದಕರಾಗಿರುವ ಸದಾಶಿವಾನಂದ ಸ್ವಾಮಿಗಳ ಯಾವುದೇ ಲೇಖನ, ಪ್ರಸ್ತಾವನೆ ಅಥವಾ ಮುನ್ನುಡಿ ಕೃತಿಯಲ್ಲಿ…