ಶರಣಸಂಸ್ಕೃತಿ/ ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.
ಸಂಸ್ಕಾರಗಳ ಒಟ್ಟು ಮೊತ್ತವೆ ಸಂಸ್ಕೃತಿ. ಸಂಸ್ಕಾರ ಕಾರಣವಾದರೆ, ಸಂಸ್ಕೃತಿ ಅದರ ಪರಿಣಾಮ. ಉದಾಹರಣೆಗೆ ಹಾಲೊಳಗೆ ತುಪ್ಪವಿದೆ. ಆದರೆ, ಅದು ಅವ್ಯಕ್ತವಾಗಿದೆ. ಅದು ವ್ಯಕ್ತವಾಗಬೇಕಾದರೆ ಹಾಲನ್ನು ಕಾಯಿಸಬೇಕು, ಹೆಪ್ಪಿಡಬೇಕು. ಮೊಸರಾದ ನಂತರ ಕಡೆಯಬೇಕು, ಮಜ್ಜಿಗೆಯಲ್ಲಿ ಬರುವ ಬೆಣ್ಣೆಯನ್ನು ಕಾಯಿಸಬೇಕು. ಆಗ ತುಪ್ಪ ಘಮಘಮಿಸುವುದು. ಹೀಗೆ ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವುದು. ಹಾಗೆಯೇ ಶಿಲೆಗೆ ಸಂಸ್ಕಾರ ಕೊಟ್ಟರೆ ಶಿಲ್ಪವಾಗುವುದು. ಶಿಲೆಯಲ್ಲಿ ಸುಂದರ ಮೂರ್ತಿಗೆ ಬೇಕಾದ ಮತ್ತು ಬೇಡವಾದ ಸಂಗತಿಗಳೆರಡೂ ಇವೆ. ಶಿಲ್ಪವಾಗಲು ಬೇಕಾದುದನ್ನು ಮಾತ್ರ ಉಳಿಸಿ ಬೇಡವಾದುದೆಲ್ಲವನ್ನೂ ಶಿಲ್ಪಿಯು ಕೌಶಲದಿಂದ ಉಳಿಯ ಪೆಟ್ಟುಗಳ ಮೂಲಕ ತೆಗೆದು ಹಾಕಿದರೆ ಸುಂದರ ಮೂರ್ತಿ…