ಬಸವಣ್ಣ ವೈಚಾರಿಕ ಚಿಂತಕ, ಪುರಾಣ ಪುರುಷನಲ್ಲ | ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.
ಬಸವಣ್ಣನವರು ಪುರಾಣ ಪುರುಷನಲ್ಲ, ಪವಾಡ ಪುರುಷನಲ್ಲ, ಉದ್ಭವ ಮೂರ್ತಿಯಲ್ಲ. ಅವರು ಮೌಲ್ಯಗಳ ಮೊತ್ತ, ತತ್ತ್ವಗಳ ತೇಜ, ಆದರ್ಶಗಳ ಆಗರ, ಅರಿವಿನ ಓಗರ, ಆಚಾರದ ಅರಸ, ಅನುಭಾವದ ಶಿಖರವಾಗಿದ್ದಾರೆ. ಬಸವಣ್ಣನವರು ದಕ್ಷ ಆಡಳಿತಗಾರ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ನೈತಿಕತಜ್ಞ, ಸಂಘಟನಕಾರ, ಸಮಾನತೆಯ ಹರಿಕಾರ, ಸಮನ್ವಯತೆಯ ಸಾಧಕ, ಭಕ್ತಿ ಭಾಂಡಾರಿ, ಕಾಯಕಯೋಗಿ, ಮಹಾದಾಸೋಹಿ, ಅನುಭವ ಮಂಟಪವೆಂಬ ಧಾರ್ಮಿಕ ಸಂಸತ್‌ಶಿಲ್ಪಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಸಮಾಜ ಶಿಲ್ಪಿ, ದೈವತ್ವದೆಡೆಗಿನ ಶಬ್ದಸೋಪಾನ ಕಟ್ಟಿದ ವಚನಶಿಲ್ಪಿ, ಸತ್ಯಶೋಧಕ, ಶ್ರೇಷ್ಠ ತತ್ತ್ವಜ್ಞಾನಿ, ಮಹಾದಾರ್ಶನಿಕ, ಸಕಾರಾತ್ಮಕ ವಿಚಾರವಾದಿ, ವೈಜ್ಞಾನಿಕ ಮನೋಭಾವಿ ಮತ್ತು ವೈಚಾರಿಕ ಚಿಂತಕರಾಗಿದ್ದಾರೆ.…




Total views : 51421