ನಿರಾಳಪ್ರಿಯ ಸೊಡ್ಡಳಯ್ಯ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಸರ್ವಸಂಗವ ಪರಿತ್ಯಾಗವ ಮಾಡಿ,ಅರಣ್ಯದಲ್ಲಿದ್ದರೆ ಮೃಗವೆಂಬರು.ಊರಿಗೆ ಬಂದರೆ ಸಂಸಾರಿ ಎಂಬರು.ಭೋಗಿಸಿದರೆ ಕಾಮಿ ಎಂಬರು,ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,ಮಾತನಾಡದಿದ್ದರೆ ಮೂಗನೆಂಬರು,ಸಹಜವ ನುಡಿದರೆ ಅಂಜುವನೆಂಬರು,ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು. (ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352) “ಸೊಡ್ಡಳ” ಎನ್ನುವ ಶಬ್ದವು ವಚನಕಾರರನ್ನು ಕುರಿತಂತೆ ಬಹಳಷ್ಟು ಗೊಂದಲವನ್ನುಂಟು ಮಾಡುತ್ತದೆ. “ಸೊಡ್ಡಳ” ಎನ್ನುವ ಶಬ್ದವು ಬಸವಣ್ಣನವರ ಸಮಕಾಲೀನ ಶರಣ ಸೊಡ್ಡಳ ಬಾಚರಸರ ಜೊತೆಗೆ “ಸಂಕೀರ್ಣ ಸಮಗ್ರ ವಚನ ಸಂಪುಟದ-4” ರ 9ನೇ ಸಂಪುಟದಲ್ಲಿ ಅಜ್ಞಾತ ಶರಣರೆಂದು ಗುರುತಿಸಿದ ಇಬ್ಬರು…

0 Comments

ವಚನ ಭಂಡಾರಿ ಶಾಂತರಸ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಮಲವ ತೊಳೆಯಬಹುದಲ್ಲದೆ,ಅಮಲವ ತೊಳೆಯಬಹುದೇ ಅಯ್ಯಾ?ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?ಮಾಟವ ಮಾಡಬಹುದಲ್ಲದೆ,ಮರ್ಮದ ಕೂಟವ ಕೂಡಬಹುದೇ ಅಯ್ಯಾ?ರಣದ ಪಂಥವ ಹೇಳಬಹುದಲ್ಲದೆ,ಕಾದಬಹುದೇ ಅಯ್ಯಾ?ಮಾತುಗಳ ಕೂಡಿ ಓತು ಹೇಳುವವರೆಲ್ಲರು,ಉಮಾಕಾಂತನ ಬಲ್ಲರೆ?ಈ ಮಾತಿನ ಮಾಲೆಗೆ ಅಂಜಿ,ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-71) ವಚನ ಭಂಡಾರಿ ಶಾಂತರಸರು 12 ನೇ ಶತಮಾನದ ವಚನ ಚಳವಳಿಯ ಪ್ರಮುಖ ಶಿವಶರಣರು ಹಾಗೂ ಬಸವಣ್ಣನವರ ಸಮಕಾಲೀನರು. ಅನುಭವ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳನ್ನು ತಾಡೋಲೆಗಳಲ್ಲಿ ದಾಖಲಿಸಿ, ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಕಾರಣ ಅವರಿಗೆ "ವಚನ ಭಂಡಾರಿ" ಎಂಬ ಗೌರವಾನ್ವಿತ ಬಿರುದು ಲಭಿಸಿದೆ.…

0 Comments

ಶರಣ ಅವಸರದ ರೇಕಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ,ಮಾತಿನ ಮಾಲೆಯ ಬೋಧೆ,ತೂತ ಜ್ಞಾನಿಗಳ ಸಂಸರ್ಗ.ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆಅದು ಎಷ್ಟು ದಿವಸ ಇರಲಾಪುದುಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕುಸದ್ಯೋಜಾತಲಿಂಗವ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂ.248/ವಚನ ಸಂಖ್ಯೆ-699) At the outset, ಈ ವಚನದ ಸಾರ ಒಂದೇ ಸಾಲಿನಲ್ಲಿ ಹೇಳುವುದಾದರೆ "ಮಾತಿಗಿಂತ ಬದುಕು ದೊಡ್ಡದು” ಶರಣ ಸಾಹಿತ್ಯ ಪರಂಪರೆಯ ಗಂಭೀರ ತಾತ್ವಿಕ ಧಾರೆಯನ್ನು ನೆನಪಿಸುವ ಈ ವಚನ “ಸದ್ಯೋಜಾತಲಿಂಗ” ಎಂಬ ಉಲ್ಲೇಖದಿಂದ ಶರಣ ಪಥದ ದರ್ಶನದ ಆಂತರಿಕ ಆತ್ಮಸಾಧನೆಯ ಭಾವನೆ ಸ್ಪಷ್ಟಪಡಿಸುತ್ತಿದೆ. ಅಂದರೆ ಮೇಲ್ಮೈಯ ಭಕ್ತಿಯದು ಕೇವಲ ಕಲಿತ ಜ್ಞಾನದಿಂದ ಬಂದ ವಿರಕ್ತಿ, ನಕಲಿ…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295)  ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295)  ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

1 Comment

ಎಣ್ಣೆ ಬೇರೆ  ಬತ್ತಿ ಬೇರೆ | ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಣ್ಣೆ ಬೇರೆ  ಬತ್ತಿ ಬೇರೆ,ಎರಡೂ ಕೂಡಿ ಸೊಡರಾಯಿತ್ತು.ಪುಣ್ಯ ಬೇರೆ ಪಾಪ ಬೇರೆ,ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು ಮಿಗದಿರಬಾರದುಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾ ಜ್ಯೋತಿವಾಯು ಕೂಡುವ ಮುನ್ನಭಕ್ತಿ ಮಾಡಬಲ್ಲಾತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ವಚನ ಸಂಖ್ಯೆ-1239) ಒಂದು ಶಬ್ದಾತೀತವಾದ ಅನುಭಾವಿಕ ವಿಷಯವನ್ನು ನಿರೂಪಿಸುವಲ್ಲಿ ಎರಡು ವೈರುಧ್ಯತೆಗಳ ಮಧ್ಯೆ ಒಂದು ಬೆಡಗನ್ನು ಸೃಷ್ಟಿಸಿ ತನ್ಮೂಲಕ ವಿಷಯ ಪ್ರಸ್ತಾವನೆ ಮಾಡುವಲ್ಲಿ ಅಲ್ಲಮ ಪ್ರಭುಗಳು ನಿಸ್ಸೀಮರು. ಸೃಷ್ಟಿಯ ಸಕಲ ಚರಾಚರಗಳಲ್ಲಿಯೂ ದೃಷ್ಟಿಗೆ ಅಗೋಚರವಾದ ಒಂದು ಸೂಕ್ಷ್ಮ ಸಂಬಂಧವಿದೆ. ಅದನ್ನೇ ಅಲ್ಲಮ ಪ್ರಭುಗಳು ಹೀಗೆ ವ್ಯಕ್ತಪಡಿಸಿದ್ದಾರೆ. ಎತ್ತಣ ಮಾಮರ ಎತ್ತಣ ಕೋಗಿಲೆ,ಎತ್ತಣಿಂದೆತ್ತ ಸಂಬಂಧವಯ್ಯಾ.ಬೆಟ್ಟದ ನೆಲ್ಲಿಕಾಯಿ…

0 Comments

ಸಿಂಹ ಮದಕರಿಯ ಮೇಲಲ್ಲದೆ | ಶಿವಯೋಗಿ ಸಿದ್ಧರಾಮೇಶ್ವರರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ,ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ?ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ,ಪಂಜರದಲ್ಲಿ ಹಾರದು ನೋಡಯ್ಯಾ!ನಮ್ಮ ಕಪಿಲಸಿದ್ಧಮಲ್ಲೇಶನನರಿವವರುಜ್ಞಾನದ ಮೇಲೆ ಹಾರುವರಲ್ಲದೆಅಜ್ಞಾನದ ಮೇಲೆ ಹಾರರು.(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1239) ಶಿವಯೋಗಿ ಸಿದ್ಧರಾಮೇಶ್ವರರು ಭಕ್ತಿ, ಕಾಯಕ, ದಾಸೋಹ ಮತ್ತು ಸಮಾನತೆಯ ಆದರ್ಶಗಳನ್ನು ಜನರಿಗೆ ಬೋಧಿಸಿದ ಮಹಾನ್ ಶರಣರು. ಅವರ ವಚನಗಳು ಮಾನವೀಯತೆ, ಆತ್ಮಜ್ಞಾನ ಮತ್ತು ಸಾಮಾಜಿಕ ಸಮರತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯನ್ನು ನೀಡಿವೆ. ಇಂದಿನ ಸಮಾಜಕ್ಕೂ ಅವರ ಚಿಂತನೆಗಳು ಪ್ರಸ್ತುತ ಮತ್ತು ಪ್ರೇರಣಾದಾಯಕವಾಗಿವೆ. ಈ ವಚನವೂ ಕೂಡ ಅದೇ ನಿಟ್ಟಿನಲ್ಲಿ ಅಂದರೆ…

0 Comments

ಮೃತ್ತಿಕೆಯೊಂದರಲ್ಲಿ ಮಡಿಕೆಗಳು ನೂರಾರು | ಶಿವಯೋಗಿ ಸಿದ್ಧರಾಮೇಶ್ವರರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು,ಮನವೊಂದರಲ್ಲಿ ಕ್ರಿಯಾಗಳು ನೂರಾರು,ಜನಕನೊಬ್ಬನಲ್ಲಿ ಸಂತತಿಗಳು ನೂರಾರು,ಘನಕ್ಕೆ ಘನನಾದ ಚಿನ್ಮಯ ಕಪಿಲಸಿದ್ಧಾಮಲ್ಲಿಕಾರ್ಜುನನಲ್ಲಿಜಗತ್ತುಗಳು ನೂರಾರು.(ಸಮಗ್ರ ವಚನ ಸಂಪುಟ: ನಾಲ್ಕು-2021/ವಚನ ಸಂಖ್ಯೆ-1953) ಈ ವಚನದ ತಾತ್ಪರ್ಯ ನೋಡುವುದಾದರೆ ಒಂದೇ ಮಣ್ಣಿನಿಂದ ಅನೇಕ ವಿಧದ ಮಡಕೆಗಳು ರೂಪುಗೊಳ್ಳುತ್ತವೆ. ಒಂದೇ ಮನಸ್ಸಿನಿಂದ ಅನೇಕ ಆಲೋಚನೆಗಳು ಮತ್ತು ಕಾರ್ಯಗಳು ಹುಟ್ಟುತ್ತವೆ. ಒಬ್ಬ ತಂದೆಯಿಂದ ಅನೇಕ ಮಕ್ಕಳು ಜನಿಸುತ್ತವೆ. ಹಾಗೆಯೇ ಪರಮ ಚೈತನ್ಯ ಸ್ವರೂಪಿಯಾದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಅನೇಕ ಜಗತ್ತುಗಳು ಅಸ್ತಿತ್ವ ಪಡೆದಿವೆ ಎಂಬುದಾಗಿದೆ. ಈ ವಚನವು ಏಕತ್ವ ಮತ್ತು ಅನೇಕತ್ವದ ಸಂಬಂಧವನ್ನು ವಿವರಿಸುತ್ತದೆ. ಏಕತ್ವ (Oneness) ಮತ್ತು ಅನೇಕತ್ವ (Diversity) ಎಂಬುವುದು ಭಾರತೀಯ ತತ್ತ್ವಶಾಸ್ತ್ರದ…

0 Comments

ಕಾಗೆಯ ತಿಂದವನಲ್ಲದೆ ಭಕ್ತನಲ್ಲ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಕಾಗೆಯ ತಿಂದವನಲ್ಲದೆ | ಭಕ್ತನಲ್ಲಕೋಣವ ತಿಂದವನಲ್ಲದೆ | ಮಹೇಶ್ವರನಲ್ಲಕೋಡಗ ತಿಂದವನಲ್ಲದೆ | ಪ್ರಸಾದಿಯಲ್ಲನಾಯ ತಿಂದವನಲ್ಲದೆ | ಪ್ರಾಣಲಿಂಗಿಯಲ್ಲಹೇಯವ ತಿಂದವನಲ್ಲದೆ | ಶರಣನಲ್ಲಇಂತೈವರ ತಿಂದವನಲ್ಲದೆ | ಲಿಂಗೈಕ್ಯನಲ್ಲ ಗುಹೇಶ್ವರಾ ||(ಸಮಗ್ರ ವಚನ ಸಂಪುಟ: ಐದು-2016/ಪುಟ ಸಂಖ್ಯೆ-256/ವಚನ ಸಂಖ್ಯೆ-1061) ಅಲ್ಲಮಪ್ರಭುಗಳ ಈ ವಚನವು ಷಟ್‌ಸ್ಥಲ ವಿಮರ್ಶೆಯ ಮೂಲಕ ಸಾಮಾಜಿಕ ವಾಸ್ತವಗಳನ್ನು ಬೆಡಗಿನ ಮನಸ್ತಿತಿ ಮೂಲಕ ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮನುಷ್ಯರ ಶರೀರದಲ್ಲಿ ಮೃಗ. ಮತ್ತು ಪಕ್ಷಿಯ ಸ್ವಭಾವಗಳು ವಾಸವಾಗಿರುತ್ತವೆ. ಪ್ರಾಣಿ ಪಕ್ಷಿ ಸಂಕುಲಗಳನ್ನು ಆಧ್ಯಾತ್ಮಿಕ ಮನೋಲೋಕದಲ್ಲಿ "ಕಾಗೆಯನ್ನು ತಿಂದವನಲ್ಲದೆ ಭಕ್ತನಾಗಲು ಸಾಧ್ಯವಾಗವಾಗುವುದಿಲ್ಲ” ಎನ್ನುವ ವ್ಯಂಗೋಕ್ತಿಯ ಪರಿಕ್ರಮವಿಲ್ಲಿ ಕಾಣಬಹುದು. ಪಕ್ಷಿ…

0 Comments

ಲದ್ದೆಯ ಸೋಮಯ್ಯ ಶರಣರ ವಚನ – ನಿರ್ವಚನ | ಶ್ರೀಮತಿ. ಲಕ್ಷ್ಮಿ ಪಾಟೀಲ, ಕಲಬುರಗಿ.

ವಚನ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ,ಗುರು ಲಿಂಗ ಜಂಗಮರ ಮುಂದಿಟ್ಟು,ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು,ವ್ಯಾಧಿ ಬಂದಡೆ ನೆರಳು, ಬೇನೆ ಬಂದಡೆ ಒರಲು,ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,ಭಾಪು ಲದ್ದೆಯ ಸೋಮಾ?(ಸಮಗ್ರ ವಚನ ಸಂಪುಟ-9/2001/ಪುಟ. ಸಂ-8/ವಚನ. ಸಂ. 20) ಅನುಭವ ಮಂಟಪದ ಅನುಭಾವಿ ಶರಣರು ಲದ್ದೆಯ ಸೋಮಯ್ಯನವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಾದಾ ಗ್ರಾಮದವರು.  ಮಡದಿ ಹೆಸರು ಮಂಗಮ್ಮ. ಹುಲ್ಲು ಮಾರುವ ಕಾಯಕ ಕೈಕೊಳ್ಳುವ ಇವರು ತಮ್ಮ ಗ್ರಾಮದಲ್ಲಿ ಹುಲ್ಲು ಕೊಯಿದು ಹುಲಸೂರಿನಲ್ಲಿ ತಂದು ಮಾರುತ್ತಿದ್ದರು. ಹುಲಸೂರು ಗ್ರಾಮದಲ್ಲಿ ಇವರ ಹೆಸರಿನಲ್ಲಿ ಗುಡಿಯೊಂದು ಇದೆ. ಇವರ…

0 Comments