“ವಚನ ಸಾಹಿತ್ಯದಲ್ಲಿ ಆರೋಗ್ಯ ಚಿಂತನೆ” ಉಪನ್ಯಾಸಕರು : ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು, ಧಾರವಾಡ
https://youtu.be/ZMv4LOTfoc4
https://youtu.be/ZMv4LOTfoc4
ಅನುಭವ ಮಂಟಪ ಕುರಿತು ಡಾ. ಶಿವಾನಂದ ಜಾಮದಾರ ಅವರು, ಡಾ. ಬೆಲ್ದಾಳ ಶರಣರು, ಶ್ರೀ ರಂಜಾನ್ ದರ್ಗಾ ಅವರು, ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದ ಅನೇಕ ವಚನ ಸಾಹಿತ್ಯದ ವಿದ್ವಾಂಸರುಗಳು ಸಾಕ್ಷೀ ಸಮೇತ ನಿರೂಪಿಸಿದ ಬಳಿಕವೂ ಈ ಥರಾ ಬರೆಯುವ ಅವಶ್ಯಕತೆ ಮತ್ತು ಇವರ ಉದ್ದೇಶವೇನು ಅಂತಾ ಅರ್ಥಾ ಆಗತಾ ಇಲ್ಲಾ. ಪ್ರಧಾನಿಗಳು ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರೀ ಅಂತ ಹೇಳಿದ್ದಕ್ಕೆ ಹೊಟ್ಟೆ ಉರೀನಾ ??? ಬಸವಣ್ಣ ಸಾಂಸ್ಕೃತಿಕ ನಾಯಕ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಹೊಟ್ಟೆ ಉರೀನಾ ??? ಯಾಕೆ ಹೀಗೆ…
"ವಚನಸಾಹಿತ್ಯ ಮಂದಾರ ಫೌಂಡೇಶನ್" ದ ಗ್ರಂಥಾಲಯ ಸ್ಥಾಪನೆ ಪ್ರಯುಕ್ತ ನಾಡಿನ ಹಲವಾರು ವಚನ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ತಮ್ಮಲ್ಲಿರುವ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಅತ್ಯಮೂಲ್ಯ ಗ್ರಂಥಗಳನ್ನು ದಾಸೋಹ ರೂಪದಲ್ಲಿ ಕಳುಹಿಸಿದ್ದಾರೆ. ಪ್ರಪ್ರಥಮವಾಗಿ ತಮ್ಮಲ್ಲಿರುವ ಅತ್ಯಮೂಲ್ಯ ಮತ್ತು ಅಪರೂಪದ ಪುಸ್ತಕಗಳನ್ನು ದಾಸೋಹ ಮಾಡಿದ ಧಾರವಾಡದ ಶ್ರೀ ನಟರಾಜ ಮೂರಶಿಳ್ಳಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮೂರಶಿಳ್ಳಿಯವರಿಗೆ ಕೃತಜ್ಞತೆಗಳು. ಇಂದಿನವರೆಗೆ ಸುಮಾರು 2,000 ಪುಸ್ತಕಗಳು ಬಂದಿವೆ. ಈಗ ವಚನಸಾಹಿತ್ಯ ಮಂದಾರ ಫೌಂಡೇಶನ್ ಗ್ರಂಥಾಲಯದಲ್ಲಿ 5,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಆಗಿದೆ. ಈ…
ಬಸವಣ್ಣ ಎಂಬ ಹೆಸರೇ ಮಂತ್ರಮುಗ್ಧವಾದದ್ದು. ಬಸವಣ್ಣನವರು 12 ನೇ ಶತಮಾನದ ಉತ್ಸಾಹದ ಚಿಲುಮೆ ಎಂತೊ 21 ನೇ ಶತಮಾನದಲ್ಲಿ ಅವರ ಹೆಸರೇ ಚೇತೋಹಾರಿಯಾದದ್ದು. ಯುಗದ ಉತ್ಸಾಹ, ಯುಗ ಪುರುಷ, ವಿಭೂತಿ ಪುರುಷ, ವಿಶ್ವಗುರು, ಜಗಜ್ಯೋತಿ ಎಂಬ ಮಾತುಗಳು ಬಸವಣ್ಣನವರಿಗೆ ಅಲಂಕಾರಿಕವಾಗಿ ತೊಡಿಸುವ ಪದಗಳಲ್ಲ. ಅವುಗಳು ಅತಿಶಯೋಕ್ತಿ ಪದಗಳೂ ಅಲ್ಲ. 12 ನೇ ಶತಮಾನದಲ್ಲಿ ಅವರ ಪ್ರಭಾವಕ್ಕೊಳಗಾಗಿ ಶಿವ-ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡದ್ದನ್ನು ನಾವು ನೋಡಿದರೆ ಒಂದು ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದು ತಿಳಿಯುತ್ತದೆ. ಸುಖವೊಂದು ಕೊಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.ದುಃಖವೊಂದು ಕೊಟ್ಯಾನುಕೋಟಿ ಬಂದಲ್ಲಿ…
ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ. 12 ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ಕರ್ನಾಟಕವು ಅಭೂತಪೂರ್ವ ಅನುಪಮ ಮಹಿಳಾ ವಚನಕಾರ್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧಾರ್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ…
ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು. ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣ ಮಾತ್ರ. ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ. ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಗ್ರಾಮ ಬಳ್ಳಿಗಾವಿ. ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ. ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು.…
ಸಮನ್ವಯತೆ ಎಂದರೆ ಒಂದಾಗಿಸಿಕೊಳ್ಳುವಿಕೆ. ಬದುಕು-ಬರಹ ಒಂದೆಯಾಗಿದ್ದರೆ ಬರಹಕ್ಕೆ ಬೆಲೆ ಬರುತ್ತದೆ. ಬದುಕಿದಂತೆ ಬರೆದ ಬರಹ ಬಹುಕಾಲ ಬದುಕುತ್ತದೆ. ಅದಕ್ಕಾಗಿ ಶರಣರು ತಾವು ಬದುಕಿದಂತೆ ಬರೆದ ವಚನಗಳು ಇನ್ನೂ ನಮ್ಮ ಮಧ್ಯೆದಲ್ಲಿವೆ. ಯಾವಾಗಲೂ ಇರುತ್ತವೆ. ವೈಜ್ಞಾನಿಕ, ವೈಚಾರಿಕ ಆಧಾರವಿಲ್ಲದ ಪವಾಡ, ಪುರಾಣಗಳಂತಹ ಸಾಹಿತ್ಯ ಪರೀಕ್ಷೆಗೊಳಪಡುತ್ತ ಹಂತ ಹಂತವಾಗಿ ಅಳಿಯುತ್ತದೆ. ಶರಣರದು ಜ್ಞಾನ-ಕ್ರಿಯೆ, ನಡೆ-ನುಡಿ, ಲೌಕಿಕ-ಪಾರಮಾರ್ಥ, ಅಂತರಂಗಕೃಷಿ-ಬಹಿರಂಗಕೃಷಿ, ಆತ್ಮಕಲ್ಯಾಣ-ಸಮಾಜಕಲ್ಯಾಣಗಳನ್ನು ಒಂದಾಗಿಸಿಕೊಂಡ ಸಮನ್ವಯಸಂಸ್ಕೃತಿಯಾಗಿದೆ. ಜ್ಞಾನ-ಕ್ರಿಯೆಗಳ ಸಮನ್ವಯತೆ: ಶರಣರು ಕೇವಲ ಅರಿವು (ಜ್ಞಾನ) ಬೆಳೆಸಿಕೊಂಡವರಲ್ಲ. ಅರಿವು, ಆಚಾರ ಎರಡನ್ನೂ ಸಮೀಕರಿಸಿಕೊಂಡವರು. ಆಚಾರದ ಮೂಲಕ ಅರಿವಿಗೆ ಮನ್ನಣೆ ನೀಡಿದವರು. ಜ್ಞಾನವೆಂದರೆ ತಿಳಿಯುವುದು. ಕ್ರಿಯೆಯೆಂದರೆ ತಿಳಿದಂತೆ…
ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ಶಿಫಾರಸು ಸಮಿತಿಯ ಮೊದಲ ಸಭೆಯ ಅಜೆಂಡಾದಲ್ಲಿ ಮೊದಲ ಪಾಯಿಂಟ್ "ಅನುಭವ ಮಂಟಪ ಕಾಲ್ಪನಿಕ" ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಗೊ. ರು. ಚನ್ನಬಸಪ್ಪ ಅವರು ಬರೆದಿದ್ದರು. ನಾನು ಕೂಡಲೆ, ನೀಲಮ್ಮನವರ ವಚನವೊಂದರಲ್ಲಿ ಅನುಭವ ಮಂಟಪದ ಕುರಿತು ಹೇಳಿದ್ದನ್ನು ಹೇಳಿ ಆ ಪಾಯಿಂಟ್ ತೆಗೆಸಿದೆ. ಆ ವಚನ ಬಹಳ ದೀರ್ಘವಾಗಿದೆ. ಹಾಗಾಗಿ ಅದರ ಮೊದಲೆರಡು ಸಾಲುಗಳನ್ನು ಹಾಗೂ ಅನುಭವ ಮಂಟಪದ ಎರಡು ಸಾಲುಗಳನ್ನು ಇಲ್ಲಿ ಬರೆದಿದ್ದೇನೆ. ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,ಕಾಮ ನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,… … … … … … … … … ……
ಅಲ್ಲಮಪ್ರಭುಗಳು ವಚನ ಸಾಹಿತ್ಯದ ಸಾರ್ವಕಾಲಿಕ ಎಚ್ಚರದ ಪ್ರತೀಕ. ಅಲ್ಲಮರಿಗೆ ಇರಬಹುದಾದ ಮೂಲ ಮಾತೃಕೆ ಯಾವುದೆಂದರೆ ತಾತ್ವಿಕ ಚರ್ಚೆಗೆ ಆಸ್ಪದ ನೀಡುವಂತಾದ್ದು. ಕನ್ನಡದ ಆದ್ಯಾತ್ಮಿಕತೆಯನ್ನು ರೂಪಿಸುವಲ್ಲಿ ವಚನ ಸಾಹಿತ್ಯ ಪರಂಪರೆಯ ಕೊಡುಗೆ ನಿಸ್ಸಂಶಯವಾಗಿ ಘನವಾದದ್ದು. ಕನ್ನಡ ಮನಸ್ಸನ್ನು ಎಚ್ಚರಿಸುವ ಎತ್ತರವನ್ನು ವಚನಗಳು ಸೂಚಿಸುತ್ತವೆ. ಅಲ್ಲಮಪ್ರಭುವಿನ ದರ್ಶನವು ಕನ್ನಡವನ್ನು ವಿಶ್ವದ ಯಾವುದೇ ಭಾಷೆಯ ಜೊತೆಗಿಡಲು ಸಾದ್ಯವಾಗುವಂತೆ ಮಾಡಿವೆ. ವಚನಗಳಾಗಲಿ, ಜನಪದ ಕಾವ್ಯಗಳಾಗಲಿ, ತತ್ವಪದಗಳಾಗಲಿ ಕಾವ್ಯವೆಂದು ಪರಿಗಣಿತವಾಗಲಿಲ್ಲ. ಕನ್ನಡ ಮೀಮಾಂಸೆಯು ಇದಕ್ಕೆ ಹೊರತಲ್ಲ. ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ಸಂಘರ್ಷಗಳ ಸಮಯ. ಬೌದ್ಧ, ನಾಥ, ಜೈನ ತಾತ್ವಿಕತೆಗಳ ಎದುರು…
You cannot copy content of this page